ಕಲಘಟಗಿ( ಧಾರವಾಡ) : ಜಿಲ್ಲೆ ಹಾಗೂ ತಾಲೂಕಿನಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ದೃಷ್ಟಿಕೋನದಿಂದ ವಿಜ್ಞಾನ ಪ್ರಶ್ನೆ ಪತ್ರಿಕೆ ಅತ್ಯಂತ ಕಷ್ಟದ ರೀತಿಯ ಸಮಸ್ಯೆ ಆಗಿದ್ದು ಇದನ್ನ ಸರಳೀಕರಣ ಸೇ ರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ನಿಮ್ಮ ಮೊಬೈಲ್ ಚಾರ್ಜರ್ ಬೇಗ ಖಾಲಿ ಆಗ್ತಿದ್ಯಾ!? ಹಾಗಿದ್ರೆ ಈ ಸಮಸ್ಯೆ ಗ್ಯಾರಂಟಿ!
ನಗರ, ಪಟ್ಟಣಭಾಗದ ಶಾಲೆಗಳಿಗೆ ಅಷ್ಟೇ ಅಲ್ಲ ಗ್ರಾಮೀಣ ಭಾಗದ ಶಾಲೆಗಳಿಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಬಿಡಿಸಲು ಸರಳವಾಗುವಂತೆ. ಪ್ರತಿಯೊಬ್ಬ ವಿದ್ಯಾರ್ಥಿ ಪ್ರಶ್ನೆ ಪತ್ರಿಕೆಯನ್ನು ಬಿಡಿಸಲು ಸಾಧ್ಯವಾಗುವ ರೀತಿಯಲ್ಲಿ ವಿಜ್ಞಾನ ವಿಷಯದಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಅಂಕ ಬಿಡಿಸುವ ನಿಟ್ಟಿನಲ್ಲಿ ಅದಕ್ಕೋಸ್ಕರ ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳಲು ಅನುಕೂಲ ಆಗಬೇಕು.
ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳನ್ನು ಬದಲಾವಣೆ ತರಲು ಸಹಕಾರಿಯಾಗಬೇಕು ಎಂದು ಮನವಿ ಮಾಡಲಾಯಿತು.
ಅಖಿಲ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀಧರ್ ಪಾಟೀಲ್ ಕುಲಕರ್ಣಿ ಅವರ ನೇತೃತ್ವದಲ್ಲಿ ಜಿಲ್ಲೆಯ ಅನೇಕ ಶಿಕ್ಷಕರು ಇಂದು ಧಾರವಾಡದಲ್ಲಿ ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು ಹಾಗೂ ವಿಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ ತರುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ವಿ ಎಸ್ ಹುದ್ದಾರ್, ಡಿಬಿ ದೊಡ್ಡಮನಿ, ಪ್ರತಿಭಾ ಹೂಗಾರ, ಸಂಜೀವ್ ಕುಮಾರ್ ಭೂ ಶೆಟ್ಟಿ, ಪ್ರಮೋದ್ ವಾದಿರಾಜ, ವನ ಮಾಲ ಹೆಗಡೆ, ರೇಣುಕಾ ಮಂಟೂರ, ಸೋಮನಾಥ್ ಸ್ವಾಮಿ, ಪ್ರಕಾಶ್ ಭೂತಲ, ದೀಪಾ ನಾಯಕ, ವೇದಿಕೆಯ ಜಿಲ್ಲಾ ಘಟಕದ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು.