ಬೆಂಗಳೂರು:- ಚೆಕ್ಬೌನ್ಸ್ ಪ್ರಕರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸುವುದಾಗಿ ಹೇಳಿರುವ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ನಾಯಕರ ಮೇಲೆ ಮಧು ಬಂಗಾರಪ್ಪ ಸೌಜನ್ಯದ ಎಲ್ಲೆ ಮೀರಿ ವೈಯಕ್ತಿಕ ಟೀಕೆಗಿಳಿದಿರುವುದು ಖಂಡನೀಯ.
ಸಾರ್ವಜನಿಕ ಜೀವನದಲ್ಲಿರುವವರ ವೈಯಕ್ತಿಕ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಗೆ ಬರುವುದು ಸಹಜ. ಮಕ್ಕಳಿಗೆ ನೈತಿಕ ಶಿಕ್ಷಣ ಹೇಳಿಕೊಡುವ ಶಿಕ್ಷಣ ಇಲಾಖೆಯ ಮುಖ್ಯಸ್ಥರು ನೈತಿಕತೆ ಪ್ರದರ್ಶಿಸದಿರುವುದು ವಿಪರ್ಯಾಸ ಎಂದು ಕೋಟ ಟೀಕಿಸಿದರು.