8,470 ಕೋಟಿ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನೋಟುಗಳು ಇನ್ನೂ ಜನರ ಬಳಿಯಲ್ಲೇ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ಬಿಐ ನಿರ್ಧಾರ ಮಾಡಿದ ಬಳಿಕ ಇವರೆಗೂ ಒಟ್ಟು ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ. 97.62ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
2023ರ ಮೇ 19 ರಂದು ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿತ್ತು. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದ್ದ ಆರ್ಬಿಐ, ಜನರು ತಮ್ಮ ಬಳಿ ಇರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹೇಗೆ ಪರಿವರ್ತನೆ ಮಾಡಿಕೊಳ್ಳಬಹುದು ಎಂದು ವಿವರಿಸಿತ್ತು.
2023ರ ಮೇ 19 ರಿಂದ 2023ರ ಅಕ್ಟೋಬರ್ 9ರವರೆಗೂ 2 ಸಾವಿರ ರೂಪಾಯಿ ನೋಟುಗಳನ್ನು ಸಾರ್ವಜನಿಕರಿಂದ ಹಿಂಪಡೆಯಲು ಆರ್ಬಿಐ ಕಚೇರಿಯಲ್ಲಿ ಅವಕಾಶ ಮಾಡಿಕೊಟ್ಟಿತ್ತು. ಜನರು ತಾವು ನೀಡಿದ ನೋಟಿಗೆ ಪ್ರತಿಯಾಗಿ ಜನರ ಖಾತೆಗೆ ಹಣ ಜಮೆ ಆಗುತ್ತಿತ್ತು. ಆ ಬಳಿಕ ಜನರು ಪೋಸ್ಟ್ ಮೂಲಕ ನೋಟು ಕಳಿಸಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ದೇಶದಲ್ಲಿ ಒಟ್ಟು 19 ಕಡೆ ಆರ್ಬಿಐ ಕಚೇರಿಗಳಲ್ಲಿ ನೋಟು ವಾಪಸಾತಿಗೆ ಅವಕಾಶ ಮಾಡಿಕೊಳ್ಳಲಾಗಿತ್ತು. ಬೆಂಗಳೂರು ನಗರದಲ್ಲೂ ಆರ್ಬಿಐ ಕಚೇರಿಯಲ್ಲಿ ಅವಕಾಶ ಇತ್ತು. ಆರಂಭದಲ್ಲಿ 2 ಸಾವಿರ ರೂಪಾಯಿ ನೋಟುಗಳ ವಿನಿಮಯಕ್ಕೆ ಸೆಪ್ಟೆಂಬರ್ 30, 2023ರವರೆಗೆ ಡೆಡ್ಲೈನ್ ನೀಡಲಾಗಿತ್ತು. ಬಳಿಕ ಈ ಡೆಡ್ಲೈನ್ ಅಕ್ಟೋಬರ್ 7ವರೆಗೆ ವಿಸ್ತರಣೆ ಮಾಡಲಾಗಿತ್ತು. ಅಕ್ಟೋಬರ್ 7ರ ಬಳಿಕ ಬ್ಯಾಂಕ್ಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನ ಜಮೆ ಮಾಡೋದನ್ನ ಸ್ಥಗಿತ ಮಾಡಲಾಗಿತ್ತು.
ಆದರೆ ದೇಶದ 19 ಕಡೆ ಆರ್ಬಿಐ ಕಚೇರಿಗಳಲ್ಲಿ ಮಾತ್ರ ನೋಟು ಬದಲಿಸಿಕೊಳ್ಳುವ ಅಥವಾ ಖಾತೆಗೆ ಹಣವನ್ನು ಹಾಕಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಆರ್ಬಿಐ ಬಳಿ ಲಭ್ಯ ಇರುವ ಅಂಕಿ ಅಂಶಗಳ ಪ್ರಕಾರ ಒಟ್ಟು 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳು ದೇಶಾದ್ಯಂತ ಚಲಾವಣೆಯಲ್ಲಿತ್ತು.
2023 ಮೇ 19ರ ನಂತರ ಜನರು ತಮ್ಮ ಬಳಿ ಇದ್ದ ನೋಟುಗಳನ್ನು ಬ್ಯಾಂಕ್ಗಳಿಗೆ ವಾಪಸ್ ಮಾಡಿದರು. ಆದರೆ, 2024 ಫೆಬ್ರವರಿ 29ರ ಮಾಹಿತಿ ಪ್ರಕಾರ ಇನ್ನೂ ಕೂಡಾ 8,470 ಕೋಟಿ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನೋಟುಗಳು ಜನರ ಬಳಿಯಲ್ಲೇ ಉಳಿದಿವೆ. ಈ ಮೂಲಕ ಆರ್ಬಿಐಗೆ 2023ರ ಮೇ 19ರಿಂದ ಈವರೆಗೆ ಒಟ್ಟು ಚಲಾವಣೆಯಲ್ಲಿ ಇದ್ದ ನೋಟುಗಳ ಪೈಕಿ ಶೇ. 97.62ರಷ್ಟು ನೋಟುಗಳು ವಾಪಸ್ ಬಂದಿವೆ.