ಮುಂಬೈ:- 97.38 ರಷ್ಟು 2ಸಾವಿರ ರೂ.ನ ಕರೆನ್ಸಿ ನೋಟುಗಳು ಡಿಸೆಂಬರ್ 29 ರವರೆಗೆ ಬ್ಯಾಂಕ್ಗಳಿಗೆ ಮರಳಿವೆ ಎಂದು ಆರ್ಬಿಐ ತಿಳಿಸಿದೆ.
2ಸಾವಿರ ರೂ.ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ನಂತರ ಶೇ.97.38 ನೋಟುಗಳನ್ನು ಡಿಸೆಂಬರ್ 29 ರವರೆಗೆ ಹಿಂತಿರುಗಿಸಲಾಗಿದೆ ಎಂದು ಆರ್ಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 19, 2023 ರಂದು ವಹಿವಾಟು ಮುಕ್ತಾಯದ ಸಮಯದಲ್ಲಿ ಸುಮಾರು 3.56 ಲಕ್ಷ ಕೋಟಿ ಮೌಲ್ಯದ 2000 ನೋಟುಗಳು ಚಲಾವಣೆಯಲ್ಲಿದ್ದವು. ಡಿಸೆಂಬರ್ 29ಕ್ಕೆ ಇನ್ನೂ 9,330 ಕೋಟಿ ರೂ.ಬಾಕಿ ಇದೆ. ಆದರೆ 2023 ಮೇ 19 ಲಭ್ಯವಿರುವ ಎರಡು ಸಾವಿರ ನೋಟುಗಳಲ್ಲಿ ಶೇ.97.38ರಷ್ಟು ನೋಟುಗಳು ಬ್ಯಾಂಕ್ಗಳಿಗೆ ತಲುಪಿವೆ ಎಂದು ಆರ್ಬಿಐ ತಿಳಿಸಿದೆ. 2000 ಕರೆನ್ಸಿ ನೋಟುಗಳಿಗೆ ಇನ್ನೂ ಕಾನೂನು ಮಾನ್ಯತೆ ಇದೆ ಎಂದು ಆರ್ಬಿಐ ಬಹಿರಂಗಪಡಿಸಿದೆ.
ನೋಟು ಅಮಾನ್ಯೀಕರಣದ ಸಮಯದಲ್ಲಿ ಪರಿಚಯಿಸಲಾದ 2ಸಾವಿರ ರೂ.ನೋಟುಗಳನ್ನು ಬ್ಯಾಂಕ್ಗಳು 2023 ರಲ್ಲಿ ಹಿಂಪಡೆಯಲು ಪ್ರಾರಂಭಿಸಿದವು. ಕಳೆದ ವರ್ಷ ಅಕ್ಟೋಬರ್ 7ರವರೆಗೆ ಎಲ್ಲಾ ಬ್ಯಾಂಕ್ಗಳಲ್ಲಿ ಎರಡು ಸಾವಿರ ನೋಟುಗಳು ಜಮೆ ಆಗಿದ್ದವು. ಆ ನೋಟುಗಳನ್ನು ಅಕ್ಟೋಬರ್ 9 ರಿಂದ ಆರ್ಬಿಐ ಕಚೇರಿಗಳಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಇನ್ನೂ ಕೆಲವರು ತಮ್ಮ ಎರಡು ಸಾವಿರದ ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕ ಕಳುಹಿಸುತ್ತಿದ್ದಾರೆ. ಅವರ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ ಎಂದು ಹೇಳಲಾಗಿದೆ.