ಬೆಂಗಳೂರು: ಭಾರತದ ಪ್ರಮುಖ ನಿದ್ರಾ ಉತ್ಪನ್ನಗಳ ತಯಾರಕರಾದ ಪೆಪ್ಸ್ ಇಂಡಸ್ಟ್ರೀಸ್ ಗ್ರಾಹಕರಿಗೆ ವಿಶ್ವದರ್ಜೆಯ ನಿದ್ರಾ ಉತ್ಪನ್ನಗಳನ್ನು ಒದಗಿಸುವ ಉದ್ದೇಶದ ಭಾಗವಾಗಿ ವಿನ್ಯಾಸಗೊಳಿಸಲಾಗಿರುವ ತನ್ನ ಹೊಸ ಐಷಾರಾಮಿ ಹಾಸಿಗೆ ಸರಣಿಯನ್ನು ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಇಂದು ಬಿಡುಗಡೆ ಮಾಡಿದೆ.
ಪೆಪ್ಸ್ ಕಂಫರ್ಟ್, ಪೆಪ್ಸ್ ಸುಪ್ರೀಮ್ ಮತ್ತು ಪೆಪ್ಸ್ ರೆಸ್ಟೋನಿಕ್ ಮೆಮೊರಿ ಫೋಮ್ ಎಂಬ ಮೂರು ಹೊಸ ಉತ್ಪನ್ನ ಸರಣಿಯನ್ನು ಅನಾವರಣಗೊಳಿಸಿದೆ. ಈ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಪೆಪ್ಸ್ ಇಂಡಸ್ಟ್ರೀಸ್ ನ ಸಹ-ಸಂಸ್ಥಾಪಕ ಮತ್ತು ಸಿಇಓ ಶಂಕರ್ ರಾಮ್ ‘ಬೆಂಗಳೂರಿನಲ್ಲಿ ಬಿಡುಗಡೆಯಾಗಿರುವ ನಮ್ಮ ಹೊಸ ಮ್ಯಾಟ್ರಿಸ್ ಗಳು ಹೊಸತನ, ಅತ್ಯುತ್ತಮ ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯಲ್ಲಿ ಉತ್ಪನ್ನ ಒದಗಿಸುವ ಪೆಪ್ಸ್ ನ ಬದ್ಧತೆಯ ಸಾಕಾರವಾಗಿವೆ. ಈ ಉತ್ಪನ್ನಗಳು ಗ್ರಾಹಕರ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸಲಿವೆ ಎಂದರು.