ಕಲಬುರಗಿ: ಸಾರ್ವಜನಿಕ ಜೀವನದಲ್ಲಿರೋರು ಎಚ್ಚರಿಕೆಯಿಂದ ಮಾತಾಡೋದನ್ನ ರೂಢಿ ಮಾಡ್ಕೋಬೇಕು ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಪರಮೇಶ್ವರ ಸಂಸದ ಪ್ರತಾಪಸಿಂಹ ನೀಡಿರುವ ಸೋಮಾರಿ ಸಿದ್ಧ ಹೇಳಿಕೆಗೆ ಈ ರೀತಿ ರಿಯಾಕ್ಟ್ ಮಾಡಿದ್ರು..
ಇದೇವೇಳೆ ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಪ್ರಭಾವಿಗಳಿಗೆ ನೋಟೀಸ್ ನೀಡಿರೋ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಉನ್ನತ ಮಟ್ಟದ ತನಿಖಾ ಸಂಸ್ಥೆ ಹತ್ರ ಏನ್ ಮಾಹಿತಿ ಇದ್ಯೋ ನನಗೆ ಗೊತ್ತಿಲ್ಲ ಅಂದ್ರು. ಮಾತ್ರವಲ್ಲ ಕೋವಿಡ್ ಹಗರಣದ ಬಗ್ಗೆ ಬಿಎಸ್ವೈ ವಿರುದ್ಧ ಯತ್ನಾಳ್ ಆರೋಪ ಮಾಡಿದ್ದು ನಮ್ಮ ಕೆಲಸವನ್ನ ಮತ್ತಷ್ಟು ಹಗುರ ಮಾಡಿದ್ದಾರೆ ಅಂದ್ರು..