ಬಡವರ ಬಾದಾಮಿ ಎಂದು ಕರೆಯಲ್ಪಡುವ ಕಡಲೆಯನ್ನು ಬೆಳಗಿನ ತಿಂಡಿಯಿಂದ ಸಿಹಿತಿಂಡಿಗಳವರೆಗೆ ಬಳಸಲಾಗುತ್ತದೆ. ಇದನ್ನು ಸದಾ ತಿನ್ನಲೂ ಅನೇಕರು ಇಷ್ಟಪಡುತ್ತಾರೆ. ಆದರೆ, ಇದು ಪ್ರೋಟೀನ್, ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು 26 ಬಗೆಯ ಖನಿಜಗಳನ್ನು ಒಳಗೊಂಡಿರುವ ಒಂದು ಬಗೆಯ ಬೀಜ ಆಗಿದೆ. ಆದರೆ ಕಡಲೆಕಾಯಿ ಹೆಚ್ಚು ತಿನ್ನುವುದರಿಂದ ದೇಹಕ್ಕೆ ಹಾನಿಯುಂಟಾಗುತ್ತದೆ.
ಥೈರಾಯ್ಡ್ ಸಮಸ್ಯೆ
ಥೈರಾಯ್ಡ್ ಸಮಸ್ಯೆ ಹೊಂದಿರುವವರು ಕಡಲೆಕಾಯಿ ಸೇವನೆ ಅಷ್ಟಾಗಿ ಒಳ್ಳೆಯದಲ್ಲ. ಅದು ನಿಮ್ಮ ಟಿಎಸ್ಹೆಚ್ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಕಡಲೆಕಾಯಿಯನ್ನು ಸೇವಿಸಬಾರದು. ಅದಾಗ್ಯೂ ಕಡಲೆಕಾಯಿ ತಿನ್ನಲು ಬಯಸಿದರೆ ನೀವು ಬಹಳ ಸೀಮಿತ ಪ್ರಮಾಣದಲ್ಲಿ ಕಡಲೆಕಾಯಿ ತಿನ್ನಬೇಕು. ಅಲ್ಲದೆ, ಥೈರಾಯ್ಡ್ ಸಮಸ್ಯೆಗೆ ಔಷಧ ತೆಗೆದುಕೊಳ್ಳುತ್ತಿದ್ದೀರಾದರೆ ಕಡಲೆಕಾಯಿ ತಿನ್ನದೇ ಇರುವುದು ಉತ್ತಮ.
ಅಧಿಕ ಬಿಪಿ ರೋಗಿಗಳಿಗೆ ಸಮಸ್ಯೆಗಳು ಉದ್ಭವಿಸುತ್ತವೆ
ಅಧಿಕ ಬಿಪಿ ಇರುವವರು ಕಡಲೆಕಾಯಿಯನ್ನು ತ್ಯಜಿಸಬೇಕು. ಕಡಲೆಕಾಯಿಯನ್ನು ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಅಧಿಕ ಸೋಡಿಯಂ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕಡಲೆಯನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವ ಅಪಾಯವೂ ಇದೆ, ಆದ್ದರಿಂದ ಇದನ್ನು ತಪ್ಪಿಸಬೇಕು. ಇದರಲ್ಲಿರುವ ಹೆಚ್ಚಿನ ಕ್ಯಾಲೋರಿಗಳು ವೇಗವಾಗಿ ತೂಕವನ್ನು ಹೆಚ್ಚಿಸುತ್ತವೆ. ಹೆಚ್ಚುತ್ತಿರುವ ಆರೋಗ್ಯದ ಅಪಾಯಗಳಿಗೆ ತೂಕ ಹೆಚ್ಚಾಗುವುದು ಕಾರಣವಾಗಿದೆ.
ಅಲರ್ಜಿ ಸಮಸ್ಯೆ
ನಿಮಗೆ ಅಲರ್ಜಿ, ತುರಿಕೆ ಸಮಸ್ಯೆ ಇದ್ದರೆ ಕಡಲೆಕಾಯಿ ತಿನ್ನುವುದು ಸೂಕ್ತವಲ್ಲ. ಏಕೆಂದರೆ ಇದರಿಂದ ತುರಿಕೆ, ಅಲರ್ಜಿ ಸಮಸ್ಯೆಗಳು ಹೆಚ್ಚಾಗಬಹುದು. ಬೇಸಿಗೆಯಲ್ಲಿ ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸ್ವೀಕರಿಸಬೇಕು.
ಯಕೃತ್ತಿನ ಸಮಸ್ಯೆ
ಯಕೃತ್ತಿನ ಸಮಸ್ಯೆ ಇರುವವರು ಕಡಲೆಕಾಯಿಯನ್ನು ಸೇವಿಸಬಹುದು. ಆದರೆ, ಹೆಚ್ಚು ತಿನ್ನಬಾರದು. ಕಡಲೆಕಾಯಿಯಲ್ಲಿ ಇರುವ ಕೆಲವು ಅಂಶಗಳು ಯಕೃತ್ತಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ವಿಶೇಷವಾಗಿ ಯಕೃತ್ತಿನ ಸಮಸ್ಯೆ ಇರುವವರು ಕಡಲೆಯಿಂದ ಸಾಧ್ಯ ಆದಷ್ಟು ದೂರ ಇರುವುದು ಉತ್ತಮ.
ಸಂಧಿವಾತ
ಸಂಧಿವಾತದಿಂದ ಬಳಲುತ್ತಿರುವವರು ಕಡಲೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಕಡಲೆಯ ಸೇವನೆಯು ಸಂಧಿವಾತ ಅಥವಾ ಗಂಟುನೋವನ್ನು ಉಲ್ಬಣಗೊಳಿಸಬಹುದು.
ಅಧಿಕ ತೂಕ
ನೀವು ಅಧಿಕ ತೂಕ ಹೊಂದಿದ್ದರೆ ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಕಡಲೆಯಲ್ಲಿ ಹೆಚ್ಚಿನ ಕ್ಯಾಲೋರಿಗಳು ಇರುವುದೇ ಇದಕ್ಕೆ ಕಾರಣ. ಕಡಲೆಕಾಯಿಯಲ್ಲಿ ವಿವಿಧ ವಿಟಮಿನ್ಗಳು, ಮಿನರಲ್ಗಳು ಇದ್ದು ಅದು ಅಧಿಕ ತೂಕಕ್ಕೆ ಕಾರಣವಾಗುತ್ತದೆ.