ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಗೋಧಿ, ಹೆಸರು ಬೇಳೆ, ಮಸೂರ, ಟೊಮೆಟೊ, ಸೋರೆಕಾಯಿ, ಹುಣಸೆಹಣ್ಣು, ಹಾಗಲಕಾಯಿ, ಕುಂಬಳಕಾಯಿ, ಹಸಿರು ಸೊಪ್ಪುಗಳು, ತರಕಾರಿ, ಹಣ್ಣುಗಳನ್ನು ಸೇವಿಸಿ ಜೊತೆಗೆ ಜೀರಿಗೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಉತ್ತಮ.
ಆದರೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಅಧಿಕ ಕೊಬ್ಬಿನ ಆಹಾರಗಳನ್ನು ಸೇವಿಸಬಾರದು. ಮೊಟ್ಟೆ,ಬೆಣ್ಣೆ,ಎಣ್ಣೆಯುಕ್ತ ಆಹಾರ, ಮಸಾಲೆಯುಕ್ತ ಆಹಾರ, ಮಾಂಸ, ತುಪ್ಪ, ಕೇಕ್, ಪಿಜ್ಜಾ. ಪ್ಯಾಕೆಟ್ ಆಹಾರ, ಜಂಕ್ ಫುಡ್ ಇಂತಹ ಆಹಾರಗಳಿಂದ ದೂರವಿರಿ.