ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ಮುಗ್ಧ ಅಲ್ಲ ಧೂರ್ತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಿಮ್ಮ ವೈಫಲ್ಯ ಮುಚ್ಚಲು ಈ ರೀತಿ ವಿವಾದ ಹುಟ್ಟು ಹಾಕೋದು ನಿಮ್ಮ ಕೆಲಸವಾ? ನಾವೇನಾದರೂ ಹಿಜಬ್ ವಿಷಯ ಎತ್ತಿದ್ವಾ? ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಬ್ ಇಲ್ಲ.
ನಿಮಗ್ಯಾಕೆ ಈ ಕೆಟ್ಟ ವಿಚಾರ. ಸಿದ್ದರಾಮಯ್ಯಗೆ ಇದು ಗೊತ್ತಿಲ್ಲ ಅಂತಾ ಅಲ್ಲ. ಸಿದ್ದರಾಮಯ್ಯ ಮುದ್ಧ ಅಲ್ಲ, ಸಿದ್ದರಾಮಯ್ಯ ಧೂರ್ತರಿದ್ದಾರೆ. ಇದು ನನ್ನ ಗಂಭೀರ ಆರೋಪ ಎಂದು ಗರಂ ಆಗಿದ್ದಾರೆ. ಸಿದ್ದರಾಮಯ್ಯನವರೇ ಏನ್ ಮಾಡೋಕೆ ಹೊರಟಿದ್ದೀರಿ. ನಿಮ್ದು ಮುಠ್ಠಾಳತನವೋ, ಸಮಾಜ ಒಡೆಯಲು ಅತ್ಯಂತ ತಲೆ ಕೆಟ್ಟವರ ಥರ ಹೇಳಿಕೆ ಕೊಡ್ತಿದ್ದೀರೋ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಸಮಾಜ ಒಡೆದು ವೋಟ್ ತೆಗೆದುಕೊಳ್ಳಬೇಕು ಅನ್ನೋದಾ? ಒಂದು ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಮಾತ್ರ ನೀವಿರೋದು. ಇದು ನಿಮ್ಮ ಸ್ಥಿತಿ. ಹೀಗೆ ನೀವು ಹುಚ್ಚ ಹುಚ್ಚರಾಗಿ ಮಾತಾಡಿದ್ರೆ ಜನ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸ್ತಾರೆ ನೆನಪಿಟ್ಟುಕೊಳ್ಳಿ ಎಂದು ಎಚ್ಚರಿಸಿದ್ದಾರೆ.