ಕೆಲವರಿಗೆ ಯಾವಾಗಲೂ ಸುಳ್ಳು ಹೇಳುವುದು ಒಂದು ರೀತಿಯ ಕಾಯಿಲೆ. ಏನೋ ಒಂದು ಸನ್ನಿವೇಶವನ್ನು ಹೇಳಿ ತಪ್ಪಿಸಿಕೊಳ್ಳಲು ಹೋಗಿ ಮತ್ತೆಮತ್ತೆ ಸುಳ್ಳು ಹೇಳಿ ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾರೆ. ಹಾಗಿದ್ದರೆ ಸುಳ್ಳು ಹೇಳಲೇಬಾರದು ಎಂಬುದಲ್ಲ. ಕೆಲವು ಸಂದರ್ಭದಲ್ಲಿ ತಮಾಷೆಯಾಗಿಯೋ ಅಥವಾ ಒಂದು ಅನಾಹುತವನ್ನು ತಪ್ಪಿಸುವ ಸಂದರ್ಭದಲ್ಲಿ ಸುಳ್ಳು ಹೇಳಿದರೆ ಅದು ತಪ್ಪಿಲ್ಲ,
ಆದ್ದರಿಂದಲೇ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನುತ್ತಾರೆ. ಆದ್ರೆ ಕೆಲ ವ್ಯಕ್ತಿಗಳು ಸಹಾನುಭೂತಿ ಪಡೆಯಲು ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿರುತ್ತಾರೆ. ಒಬ್ಬ ವ್ಯಕ್ತಿಯು ಸತ್ಯವನ್ನು ಹೇಳುತ್ತಿದ್ದಾನೋ ಅಥವಾ ಸುಳ್ಳನ್ನು ಹೇಳುತ್ತಿದ್ದಾನೋ ಎಂದು ನಾವು ತಿಳಿದುಕೊಳ್ಳಬಹುದು. ಹೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ..
ಮಾತನಾಡುವ ಧ್ವನಿಯಲ್ಲಿ ಏರಿಳಿತ :
ಸಾಮಾನ್ಯವಾಗಿ ಸುಳ್ಳು ಹೇಳುವ ಜನರು ಜೋರಾಗಿ ಮಾತನಾಡುತ್ತಾರೆ ಇಲ್ಲವಾದರೆ ತುಂಬಾ ಮೃದುವಾಗಿ ಮಾತನಾಡುತ್ತಾರೆ. ಎದುರಿಗಿರುವ ಜನರೊಂದಿಗೆ ಮಾತನಾಡುವಾಗಲೆಲ್ಲಾ ಧ್ವನಿಯೂ ಸಹಜವಾಗಿ ಕೇಳಿಸುವುದಿಲ್ಲ. ಯಾರಿಗೂ ಏನನ್ನೂ ಹೇಳಲು ಬಯಸುವುದಿಲ್ಲ ಎಂಬಂತೆ ಯಾವಾಗಲೂ ನಿಮ್ಮೊಂದಿಗೆ ಮಾತನಾಡಬಹುದು.
ಅಸಂಬದ್ಧ ಮಾತುಗಳು :
ಈ ವ್ಯಕ್ತಿಗಳ ಬಾಯಲ್ಲಿ ಸತ್ಯದ ಬದಲು ಸುಳ್ಳೇ ಹೆಚ್ಚಿರುತ್ತದೆ. ಒಂದೇ ಒಂದು ಸತ್ಯವಾದ ವಿಷಯಗಳು ಅಡಗಿರುವುದಿಲ್ಲ. ಎದುರಿಗಿರುವ ವ್ಯಕ್ತಿಯೂ ಏನನ್ನಾದರೂ ಹೇಳಿದರೆ ಅದಕ್ಕೆ ಸಂಬಂಧಿಸಿದ ಬೇರೆ ಏನನ್ನೋ ಹೇಳಲು ಪ್ರಾರಂಭಿಸುತ್ತಾರೆ. ಆದರೆ ಮುಖ್ಯ ವಿಷಯದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅವರ ಮಾತುಗಳು ಅಸಂಬದ್ಧವಾಗಿರುತ್ತದೆ. ಈ ಜನರ ಮಾತುಗಳನ್ನು ನಂಬಲು ಸಾಧ್ಯವಿರುವುದಿಲ್ಲ.
ಭಾವನಾತ್ಮಕ ಮಾತಾಡಿ ಮರಳು ಮಾಡುವುದು :
ಸುಳ್ಳು ಹೇಳುವ ಜನರು ತಮ್ಮ ಜೊತೆಗೆ ಭಾವನಾತ್ಮಕವಾಗಿ ಸುಳ್ಳು ಹೇಳಿ ಬಳಸಿಕೊಳ್ಳುತ್ತಾರೆ..ಅದಲ್ಲದೇ ತಮ್ಮ ವೈಯಕ್ತಿಕ ಲಾಭಕ್ಕಾಗಿ ಭಾವನಾತ್ಮಕ ಮಾತುಗಳನ್ನು ಆಡುತ್ತಾರೆ. ಜನರ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಾರೆ..ಆದರೆ ತಾನು ಏನು ಹೇಳಿದ್ದೇನೆ ನೆನಪು ಇಲ್ಲದ ಸಂದರ್ಭದಲ್ಲಿ ಸಿಕ್ಕಿ ಬೀಳುವುದೇ ಹೆಚ್ಚು. ಆದರೆ ತಾವು ಅಂದುಕೊಂಡ ಕೆಲಸ ಮಾಡಿ ಮುಗಿಸಲು ಯಾವುದೇ ಸಮಯದಲ್ಲಿ ಏನನ್ನಾದರೂ ಹೇಳಲು ಸಿದ್ಧವಿರುತ್ತಾರೆ.
ಮುಖ ಭಾವದಲ್ಲಿ ಬದಲಾವಣೆ :
ಸುಳ್ಳು ಹೇಳುವ ವ್ಯಕ್ತಿಯನ್ನು ಕಂಡುಹಿಡಿಯಲು ಸುಲಭವಾದ ಮಾರ್ಗವೆಂದರೆ ಅವರ ಮುಖ ಭಾವವನ್ನು ಗಮನಿಸುವುದು. ಈ ವ್ಯಕ್ತಿಗಳು ಸುಳ್ಳು ಹೇಳಲು ಹೆದರುವುದರಿಂದ, ಮಾತಾಡುವಾಗ ಕಣ್ಣಿನ ಸಂಪರ್ಕವನ್ನು ಮಾಡಿಕೊಳ್ಳುವುದಿಲ್ಲ. ಮಾತಿನ ನಡುವೆ ಮುಖಭಾವದಲ್ಲಿ ಬದಲಾವಣೆಗಳು ಹಾಗೂ ಅವರ ಗಮನ ಬೇರೆಲ್ಲೋ ಇರುತ್ತದೆ. ಕೆಲವೊಮ್ಮೆ ವಿಷಯಗಳನ್ನು ಪೂರ್ಣವಾಗಿ ಹೇಳದೇ ತಿರುಚಿ ಹೇಳುತ್ತಾರೆ.
ವಿಷಯಗಳನ್ನು ಉತ್ಪ್ರೇಕ್ಷಿಸುವುದು :
ಸುಳ್ಳು ಹೇಳುವ ಜನರ ದೊಡ್ಡ ಅಭ್ಯಾಸವೆಂದರೆ ಯಾವುದೇ ವಿಷಯ ವಿರಲಿ, ಆ ವಿಷಯಗಳನ್ನು ಉತ್ಪ್ರೇಕ್ಷಿಸುವುದು. ಯಾರಾದರೂ ಅವರೊಂದಿಗೆ ಸಾಮಾನ್ಯ ರೀತಿಯಲ್ಲಿ ಮಾತನಾಡಲು ಬಯಸಿದ್ದರೂ ಕೂಡ, ಆ ವಿಷಯಗಳನ್ನು ಉತ್ಪ್ರೇಕ್ಷಿಸುತ್ತಾರೆ. ಇದು ಎದುರಿಗಿರುವ ವ್ಯಕ್ತಿಯನ್ನು ಆಸಕ್ತಿ ಮೂಡಿಸುತ್ತದೆ, ಕೊನೆಗೆ ವಿಷಯಗಳನ್ನು ವಿಶ್ಲೇಷಿಸಲು ಪ್ರಾರಂಭಿಸುತ್ತಾರೆ.