ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಕಿ ಕೊಡದೇ ಇದ್ದಿದ್ದರೆ, ರಾಜ್ಯದಲ್ಲಿ ಅರ್ಧದಷ್ಟು ಜನ ಸಾಯಬೇಕಿತ್ತು ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ.ರವಿ ಕಾಂಗ್ರೆಸ್ ಕಿಡಿಕಾರಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಇನ್ನೂ ಐದು ವರ್ಷ ಅಕ್ಕಿ ಕೊಡುವ ಭರವಸೆ ನೀಡಿದ್ದಾರೆ. ಈಗಿನ ಕಾಂಗ್ರೆಸ್ ಸರಕಾರ ಕೇವಲ ಅಕ್ಕಿಭಾಗ್ಯದ ಭರವಸೆ ಕೊಟ್ಟಿದೆ.
ಜನರು ಕಾಂಗ್ರೆಸ್ನ್ನೇ ನಂಬಿಕೊಂಡು ಕೂತಿದ್ದರೆ ಅರ್ಧದಷ್ಟು ಜನ ಸಾಯಬೇಕಾಗಿತ್ತು ಎಂದು ಹೇಳಿದರು. ಬಿಜೆಪಿಯವರಿಗೆ ಶ್ರೀರಾಮ್ ಎನ್ನುವುದನ್ನು ಬಿಟ್ಟರೆ ಬೇರೆ ಗೊತ್ತಿಲ್ಲಎನ್ನುವ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಹಿಂದೂ ಆಗಿಯೇ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ಗೆ ತಿರುಗೇಟು ನೀಡಿದರು.
https://ainlivenews.com/suprem-ray-healing-center-reiki/
ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಬಿಜೆಪಿ ನೇರವಾಗಿ ತೊಡಗಿಸಿಕೊಂಡಿತ್ತು. ರಾಮಮಂದಿರಕ್ಕೆ ವಿರೋಧ ಮಾಡಿದ್ದು, ಕಾಂಗ್ರೆಸ್ ಪಕ್ಷ. ಹಜ್ ಯಾತ್ರೆಗೆ ಕಳಿಸುವುದು ಮಾತ್ರ ಜಾತ್ಯತೀತತೆಯೇ? ಅಯೋಧ್ಯೆಗೆ ಯಾತ್ರೆ ಕಳುಹಿಸಿದರೆ ಜಾತ್ಯತೀತತೆಗೆ ಭಂಗ ಬರುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಚುನಾವಣೆ ವೇಳೆ ಹಿಂದೂಗಳು ಇದೇ ರೀತಿ ಮಾತನಾಡುತ್ತಾರೆ ಎಂದು ಕಿಡಿ ಕಾರಿದರು.