ಬೆಂಗಳೂರು: ಪಟಾಕಿ ಮಾರಾಟದ ವಿಚಾರವಾಗಿ ಕೋರ್ಟ್ಗೆ ಮೊರೆ ಹೋಗಿದ್ದ ಪಟಾಕಿ ಮಾಲೀಕರಿಗೆ ಇದೆ ತಿಂಗಳ 17ನೇ ತಾರೀಖಿನವರೆಗೂ ಪಟಾಕಿ ಮಾರಾಟಕ್ಕೆ ಕರ್ನಾಟಕದ ಹೈಕೋರ್ಟ್ ಅನುಮತಿ ನೀಡಿದೆ ಹೀಗಾಗಿ ಇಂದು ಅತ್ತಿಬೆಲೆಯಿಂದ ಚಂದಾಪುರದವರೆಗೆ ಪಟಾಕಿ ಅಂಗಡಿಗಳು ತಲೆಹತ್ತಿದೆ..
ಇನ್ನು ಹೈಕೋರ್ಟ್ 21 ಜನ ಪಟಾಕಿ ಮಾರಾಟಗಾರರು ಮಾರಾಟದ ವಿಚಾರವಾಗಿ ಕೋರ್ಟ್ಗೆ ಮೊರೆ ಹೋಗಿದ್ದರು.. ಹೀಗಾಗಿ ನೆನ್ನೆ ರಾತ್ರಿ ಹೈಕೋರ್ಟ್ ಪಟಾಕಿ ಮಳಿಗೆಗಳಿಗೆ ಅನುಮತಿಯನ್ನು ನೀಡಿದೆ. ಇನ್ನು ಪಟಾಕಿ ಅಂಗಡಿ ಮಾರಾಟಕ್ಕೆ ಅನುಮತಿ ಸಿಕ್ಕಿದ್ದ ಬೆನ್ನಲ್ಲೇ ಪಟಾಕಿಯನ್ನು ಖರೀದಿ ಮಾಡಲು ಗ್ರಾಹಕರು ಮುಗಿಬಿದ್ದಿದ್ದಾರೆ.. ಇನ್ನು ಪಟಾಕಿ ಖರೀದಿಗಾಗಿ ಹೆದ್ದಾರಿಯಲ್ಲಿ ಟಾಪಿಕ್ ಜಾಮ್ ಉಂಟಾಗಿತ್ತು ಅಲ್ಲದೆ ಟ್ರಾಫಿಕ್ ಜಾಮ್ ಆಗಿ ಜನರು ಪರದಾಡುವಂತೆ ಪರಿಸ್ಥಿತಿ ಎದರಗಿತ್ತು
ಇನ್ನು ಈ ಹಿಂದೆ ಸೆಪ್ಟೆಂಬರ್ 7ನೇ ತಾರೀಖಿನಂದು ಅತ್ತಿಬೆಲೆ ಪಟಾಕಿ ಅಂಗಡಿಲಿ ಅಗ್ನಿ ದುರಂತದಿಂದ 17 ಜನ ಮೃತಪಟ್ಟಿದ್ದು ಸರ್ಕಾರ ಅನುಮತಿಯನ್ನು ನಿರಾಕರಣೆ ಮಾಡಿದ್ದು ದೀಪಾವಳಿ ಅಂಗವಾಗಿ ಗ್ರೀನ್ ಪಟಾಕಿ ಹೊಡೆಯಲು ಗ್ರೀನ್ ಸಿಗ್ನಲ್ ನ್ನು ಕೊಟ್ಟಿತ್ತು ಹೀಗಾಗಿ 17ನೇ ತಾರೀಕು ತನಕ ಪಟಾಕಿಯನ್ನು ಮಾರಾಟ ಮಾಡಲು ಅನುಮತಿಯನ್ನು ನೀಡಿದೆ..