‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಹನುಮಂತ ವಿನ್ ಆಗಿದ್ದಾರೆ. ಹನುಮಂತನ ಗೆಲುವು ಹಲವರ ಚರ್ಚೆಗೆ ಕಾರಣವಾಗಿದೆ. ವಿನ್ನರ್ ಘೋಷಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಅನೇಕರು ಹನುಮಂತ ಅವರ ಆಟವನ್ನು ಟೀಕಿಸಿದ್ದು, ಹನುಮಂತ ಕೇವಲ ಸಿಂಪತಿಯಿಂದಲೇ ವೋಟ್ ಪಡೆದಿದ್ದಾರೆ ಎಂದು ಅನೇಕರು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಮೊದಲ ದಿನವೇ ಎಂಟ್ರಿ ಕೊಟ್ಟವರು. ಕೆಲ ವಾರ ಬಿಟ್ಟು ದೊಡ್ಮನೆಗೆ ಬಂದವರು ಹನುಮಂತ. ಅವರು ಟಾಸ್ಕ್ನಲ್ಲಿ ಉತ್ತಮವಾಗಿ ಆಡಿದರು. ಆದರೆ ಅನೇಕರಿಗೆ ಇದು ಕಾಣಿಸುತ್ತಿಲ್ಲ. ಹನುಮಂತ ಅವರು ಸಿಂಪತಿ ಗಿಟ್ಟಿಸಿಕೊಂಡಿದ್ದು ಇದರಿಂದಲೇ ಬಿಗ್ ಬಾಸ್ ಟ್ರೋಪಿ ಗೆದಿದ್ದಾರೆ ಎಂದು ಹಲವರು ಆರೋಪ ಮಾಡ್ತಿದ್ದಾರೆ.
ತ್ರಿವಿಕ್ರಂ ಅವರು ರನ್ನರ್ ಅಪ್ ಎಂದು ಇನ್ಸ್ಟಾಗ್ರಾಮ್ನಲ್ಲಿ ಕಲರ್ಸ್ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ತ್ರಿವಿಕ್ರಂ ಅಭಿಮಾನಿಗಳು ಹನುಮಂತ ಗೆದ್ದಿದ್ದಕ್ಕೆ ಬೇಸರ ಹೊರಹಾಕಿದ್ದಾರೆ. ‘ಜನ ಆಟಕ್ಕಿಂತ ಸಿಂಪತಿಗೆ ಯಮಾರಿದ್ರು’ ಎಂಬ ಕಮೆಂಟ್ ಮಾಡ್ತಿದ್ದಾರೆ.
ಇನ್ನೂ ಕೆಲವರು ಹನುಮಂತ ಗೆದ್ದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಹಳ್ಳಿಯಿಂದ ಬಂದ ಯುವಕ ಎಲ್ಲರನ್ನೂ ಮೀರಿಸಿ ಗೆದ್ದಿರುವುದು ಹಲವರಿಗೆ ಖುಷಿ ತಂದಿದೆ.