ಇಂಡೋನೇಷ್ಯಾದಲ್ಲಿ ಕೆಲ ಪ್ರದೇಶಗಳ ಆಚರಣೆಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಮೃತದೇಹವನ್ನು ಅಂತಿಮವಾಗಿ ಮಣ್ಣಲ್ಲಿ ಹಾಕುವ ಮುಂಚೆ, ಪಂಚಭೂತಗಳಲ್ಲಿ ಲೀನ ಮಾಡುವ ಮುಂಚೆ ಸ್ನಾನ ಮಾಡಿಸುವುದು ಭಾರತದಲ್ಲಿರುವ ಕೆಲ ಜನ ಸಮುದಾಯದ ವಾಡಿಕೆ. ಆದರೆ ಇಂಡೋನೇಷ್ಯಾದಲ್ಲಿ ಸತ್ತವರನ್ನು ಮಣ್ಣಿನಿಂದ ತೆಗೆದು ಸ್ನಾನ ಮಾಡಿಸಿ ಹಬ್ಬದಂತೆ ಆಚರಿಸುವ ವಿಶೇಷ ಪದ್ಧತಿ ವಾಡಿಕೆಯಲ್ಲಿದೆ. ಈ ಸುದ್ದಿ ಓದಿ ನಿಮಗೆ ಶಾಕ್ ಎನಿಸಿದರು ಈ ಆಚರಣೆ ನಡೆಯುವುದು ನಿಜ.
ಬೆಂಗಳೂರಿನಲ್ಲಿ ಹದಗೆಟ್ಟ ಕಾನೂನು ವ್ಯವಸ್ಥೆ: ಪುಂಡರಿಗಿಲ್ಲ ಪೊಲೀಸರ ಭಯ!
ಇಂಡೋನೇಷಿಯಾದ ದಕ್ಷಿಣ ಸುಲವೆಸಿಯ ಟೊರಾಜಾ ಪ್ರದೇಶದಲ್ಲಿ ದತೊರಾಜಾ ಸಮುದಾಯದ ಜನರು ಮಾನೆನ್ ಎಂಬ ಅಸಾಮಾನ್ಯ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ.
ಪ್ರತಿ ವರ್ಷ ಆಗಸ್ಟ್ ನಲ್ಲಿ ಇಂಡೋನೇಷ್ಯಾ ದತೊರಾಜಾ ಸಮುದಾಯದ ಜನರು ಪ್ರತಿ ವರ್ಷ ಆಗಸ್ಟ್ ನಲ್ಲಿ ತಮ್ಮ ಕುಟುಂಬ ಸದಸ್ಯರ ಶವಗಳನ್ನು ಸಮಾಧಿಯಿಂದ ಹೊರತೆಗೆದು ಅವುಗಳನ್ನು ಸ್ವಚ್ಛಗೊಳಿಸಿ, ಬಟ್ಟೆ ಬದಲಾಯಿಸಿ ನೆಚ್ಚಿನ ವಸ್ತುಗಳೊಂದಿಗೆ ಮತ್ತೆ ಸಮಾಧಿಯಲ್ಲಿ ಇರಿಸುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದು, ಇದನ್ನು ‘ಮನೆನ್’ ಎಂದು ಕರೆಯಲಾಗುತ್ತದೆ.
ಕುಟುಂಬಗಳು ತಮ್ಮ ಸತ್ತ ಸಂಬಂಧಿಕರ ಶವಗಳನ್ನು ಸಮಾಧಿಯಿಂದ ಹೊರತೆಗೆದು ಸ್ವಚ್ಛಗೊಳಿಸುತ್ತಾರೆ. ಪ್ರತಿ ವರ್ಷ ಅಥವಾ ಮೂರು ವರ್ಷ ಅಥವಾ ಐದು ವರ್ಷಗಳಿಗೊಮ್ಮೆ ಆಗಸ್ಟ್ನಲ್ಲಿ ಈ ಸಂಪ್ರದಾಯವನ್ನು ನಡೆಸಲಾಗುತ್ತದೆ.
ದತೊರಾಜಾ ಸಮುದಾಯದ ಜನರು ಅಂತ್ಯಕ್ರಿಯೆ ಮತ್ತು ಅನಂತರದ ವಿಧಿಗಳಿಗೆ ಹೆಚ್ಚಿನ ಸಮಯ ಮತ್ತು ಹಣವನ್ನು ವಿನಿಯೋಗಿಸುತ್ತಾರೆ. ಮರಣವು ಅಂತ್ಯವಲ್ಲ ಎಂಬುದಾಗಿ ನಂಬುತ್ತಾರೆ. ಪೂರ್ವಜರ ಆತ್ಮಗಳನ್ನು ಸಮಾಧಾನಪಡಿಸುವುದು ಅವರಿಗೆ ಮುಖ್ಯವಾಗಿದೆ. ಪೂರ್ವಜರು ಅಸಮಾಧಾನಗೊಂಡರೆ ಕಳಪೆ ಭತ್ತದ ಕೊಯ್ಲಿಗೆ ಕಾರಣವಾಗಬಹುದು ಎನ್ನುವುದು ಅವರ ನಂಬಿಕೆ.
ಕುಟುಂಬ ಸದಸ್ಯರು ಸತ್ತ ಬಳಿಕ ಅವರ ದೇಹಗಳನ್ನು ಸುದೀರ್ಘ ಕಾಲದವರೆಗೆ ಮನೆಯಲ್ಲಿ ಇರಿಸುತ್ತಾರೆ. ಅದ್ದೂರಿಯಾಗಿ ಅಂತ್ಯಕ್ರಿಯೆಗಳನ್ನು ನಡೆಸುತ್ತಾರೆ.
ದತೊರಾಜಾ ಸಮುದಾಯದ ಜನರು ನಿಧನರಾದ ಜನರ ಶವಗಳನ್ನು ಮನೆಯಲ್ಲಿಯೇ ಇರಿಸುತ್ತಾರೆ. ಕೆಲವೊಮ್ಮೆ ವರ್ಷಗಳವರೆಗೆ ಇಟ್ಟುಕೊಳ್ಳುತ್ತಾರೆ. ಕುಟುಂಬವು ಅಂತ್ಯಕ್ರಿಯೆಗೆ ಸಾಕಷ್ಟು ಹಣವನ್ನು ಹೊಂದಿಸುವವರೆಗೂ ಶವವನ್ನು ಇಟ್ಟುಕೊಳ್ಳುತ್ತಾರೆ. ಅಂತ್ಯಕ್ರಿಯೆಯ ಸಮಾರಂಭಗಳು 12 ದಿನಗಳವರೆಗೆ ನಡೆಯುತ್ತದೆ. ಇದರಲ್ಲಿ ನೂರಾರು ಎಮ್ಮೆ, ಹಂದಿಗಳ ಬಲಿಯನ್ನು ಕೊಡಲಾಗುತ್ತದೆ. ಇಂತಹ ಸಮಾರಂಭಗಳಿಗೆ ನೂರಾರು ಸಾವಿರ ಡಾಲರ್ಗಳಷ್ಟು ವೆಚ್ಚವಾಗುವುದು.
ಪ್ರತಿ ವರ್ಷ ಆಗಸ್ಟ್ ತಿಂಗಳು, ವಸಂತ ಮಾಸದ ಕೊನೆಯಲ್ಲಿ ಮಾನೆನೆ ಆಚರಣೆಯನ್ನು ಸಂಭ್ರಮದಿಂದ ಟೊರೊಜಾ ಜನ ಆಚರಿಸುತ್ತಾರೆ. ಸಮಾಧಿಗಳಿಂದ ಸತ್ತವರ ದೇಹವನ್ನು ಹೊರ ತೆಗೆದು ಅವುಗಳನ್ನು ಸ್ವಲ್ಪ ಗಲೀಜು ಇಲ್ಲದೆ ಎಲ್ಲರೂ ಸೇರಿ ಸ್ವಚ್ಛಗೊಳಿಸುತ್ತಾರೆ. ಯಾವುದೇ ಹುಳುಗಳು, ಕೊಳಕು ಇಲ್ಲದಂತೆ ತುಂಬಾ ಜಾಗ್ರತೆಯಿಂದ ಶುಚಿ ಮಾಡಿದ ನಂತರ ಹೊಸ ಬಟ್ಟೆಗಳನ್ನು ಹಾಕಿ ಸಮಾಧಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ.
ನಿರ್ಜೀವ ದೇಹಗಳನ್ನು ಸ್ವಚ್ಛ ಮಾಡಿ ಪ್ರೀತಿ, ಗೌರವದಿಂದ ಅಂದವಾಗಿ ಅಲಂಕಾರ ಮಾಡುತ್ತಾರೆ. ಅನಾದಿ ಕಾಲದಿಂದಲೂ ಬರುತ್ತಿರುವ ಪದ್ಧತಿಗಳನ್ನು ಅನುಸರಿಸುತ್ತಾ ಬರುವುದರ ಜೊತೆಗೆ ಟೊರೊಜಾ ಜನ ಎಲ್ಲರೂ ಒಟ್ಟಿಗೆ ಸೇರುವ ಮೂಲಕ ಸಂಬಂಧಗಳ ಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಾರೆ.
ಟೊರೊಜಾ ಜನರ ಈ ಪದ್ಧತಿ ಈಗ ಜಾಗತಿಕವಾಗಿ ಗಮನ ಸೆಳೆದಿದೆ. ತಮ್ಮ ಸಂಬಂಧಿಗಳು ಮೃತಪಟ್ಟರೂ ಅವರ ಮೇಲಿನ ಗೌರವ, ಪ್ರೀತಿ, ಕಾಳಜಿ ಸ್ವಲ್ಪವೂ ಕಡಿಮೆ ಮಾಡದೆ ಬದುಕಿದ್ದಾಗ ಹೇಗೆ ನೋಡಿಕೊಳ್ಳುತ್ತಾರೋ ಅದೇ ರೀತಿ ಸಾವನ್ನಪ್ಪಿದ ಮೇಲೂ ಆಚರಿಸುವ ಪದ್ಧತಿಗಳನ್ನು ನೋಡಲು ಪ್ರವಾಸಿಗರ ದಂಡು ಅಲ್ಲಿಗೆ ಭೇಟಿ ನೀಡುತ್ತಿದೆ.