ಬೆಂಗಳೂರು: ನನ್ನನ್ನ ಸೋಲಿಸಲು ಬೆಂಗಳೂರು ಗ್ರಾಮಾಂತರದಲ್ಲಿ ತೀರ್ಮಾನ ಮಾಡಬೇಕಾಗಿರೋದು ಕ್ಷೇತ್ರದ ಜನ. ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಅಲ್ಲ ಅಂತ ಸಂಸದ ಡಿ.ಕೆಸುರೇಶ್ (DK Suresh) ಅವರು ತಿರುಗೇಟು ಕೊಟ್ಟಿದ್ದಾರೆ.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಕುಮಾರಸ್ವಾಮಿ-ವಿಜಯೇಂದ್ರ (BY Vijayendra) ಭೇಟಿ ವಿಚಾರ ಹಾಗೂ 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ (Congress) ಸೋಲಿಸುತ್ತೇವೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಸುರೇಶ್ ಪ್ರತಿಕ್ರಿಯೆ ನೀಡಿದರು. ಅವರಿಬ್ಬರಿಗೂ ಒಳ್ಳೆಯದಾಗಲಿ. ಅವರಿಬ್ಬರೇ ನನ್ನನ್ನ ಸೊಲಿಸೋಕೆ ಆಗುತ್ತಾ. ನನ್ನನ್ನ ಸೋಲಿಸೋಕೆ ಕ್ಷೇತ್ರದ ಜನ ತೀರ್ಮಾನ ಮಾಡಬೇಕು. ನನ್ನ ಕ್ಷೇತ್ರದ 24 ಲಕ್ಷ ಜನರು ಈ ಬಗ್ಗೆ ತೀರ್ಮಾನ ಮಾಡಬೇಕು ಅಂತ ಕುಮಾರಸ್ವಾಮಿ-ವಿಜಯೇಂದ್ರಗೆ ಡಿ.ಕೆ ಸುರೇಶ್ ತಿರುಗೇಟು ಕೊಟ್ರು.
ಬೆಂಗಳೂರು ಉತ್ತರದಲ್ಲಿ ಡಿ.ಕೆ ಸುರೇಶ್ ಸ್ಪರ್ಧೆ ಮಾಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ನಾನು ತೀರ್ಮಾನ ಮಾಡೋದು ಅಲ್ಲ. ನಾನು ಎಲ್ಲಿ ನಿಂತುಕೊಳ್ಳಬೇಕು ಅಂತ ತೀರ್ಮಾನ ಮಾಡೋದು ಹೈಕಮಾಂಡ್. ಹೈಕಮಾಂಡ್ ಎಲ್ಲಿ ನಿಲ್ಲು ಅಂತ ಹೇಳುತ್ತೋ ಅಲ್ಲಿ ನಿಲ್ಲುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ದ ಎಂದರು.