ಧಾರವಾಡ: ರಾಜ್ಯದ ಎರಡು ಜಿಲ್ಲೆಗಳಲ್ಲಿ ಮಾತ್ರ ಪ್ರತಿಷ್ಠಾಪನೆಗೊಳ್ಳುವ ಸಸಿ ಡೋಲಿಯನ್ನು ನೋಡಲು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಹತ್ತಿ ಮತ್ತು ಅಳವೆ ಬೀಜಗಳಿಂದ ಈ ಸಸಿ ಡೋಲಿಯನ್ನು ನಿರ್ಮಾಣ ಮಾಡಲಾಗುತ್ತದೆ. ಇದನ್ನು ನಿರ್ಮಾಣ ಮಾಡುವಾಗ ಅದರದ್ದೇ ಆದ ಕೆಲವು ಕಟ್ಟು ಪಾಡುಗಳಿವೆ. ಹತ್ತಿಯಲ್ಲಿ ಅಳವೆ ಬೀಜಗಳನ್ನು ಹಾಕಿ ಮೊಹರಂ ಕೊನೆಯ ದಿನದವರೆಗೂ ಡೋಲಿಯಲ್ಲಿ ಅಳವೆ ಬೀಜಗಳನ್ನು ಬೆಳೆಸಲಾಗುತ್ತದೆ.
ಈ ರೀತಿ ಡೋಲಿ ನಿರ್ಮಾಣವಾಗೋದು ರಾಜ್ಯದ ಎರಡು ಜಿಲ್ಲೆಗಳಲ್ಲಿ ಮಾತ್ರ. ವಿಜಯಪುರ ಜಿಲ್ಲೆ ಬಿಟ್ಟರೆ ಈ ಡೋಲಿ ನೋಡಲು ಸಿಗೋದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಾತ್ರ. ಮೊಹರಂ ಕೊನೆಯ ದಿನವಾದ ಬುಧವಾರ ಉಪ್ಪಿನ ಬೆಟಗೇರಿ ಗ್ರಾಮದ ಅನೇಕ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಡೋಲಿ ಹಾಗೂ ಪಾಂಜಾಗಳು ಗ್ರಾಮದ ಕೂಟ್ನಲ್ಲಿ ಸಮಾಗಮಗೊಂಡವು. ಇದರಲ್ಲಿ ಪ್ರಮುಖವಾಗಿ ಗಮನಸೆಳೆದಿದ್ದು ಇದೇ ಸಸಿ ಡೋಲಿ.
Warm Water: ರಾತ್ರಿ ಮಲಗುವ ಮನ್ನ ಒಂದು ಲೋಟ ʼʼಬಿಸಿ ನೀರುʼʼ ಕುಡಿದ್ರೆ ಏನಾಗುತ್ತೆ ಗೊತ್ತಾ..?
ಕೂಟ್ನಲ್ಲಿ ಬಂದು ಸೇರಿದ ಎಲ್ಲ ಡೋಲಿಗಳನ್ನು ಅದರಲ್ಲೂ ಪ್ರಮುಖವಾಗಿ ಸಸಿ ಡೋಲಿಯನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಎಲ್ಲ ಡೋಲಿಗಳು ಸಮಾಗಮಗೊಂಡ ನಂತರ ಊದಿ ಹಾಕಿ ಹಸೇನ್ ಹುಸೇನ್ ಕೀ ದೋಸ್ತರಾ ಧೀನ್ ಎಂದು ಘೋಷಣೆ ಕೂಗಿ ನಮನ ಸಲ್ಲಿಸಲಾಯಿತು. ಹಿಂದೂ, ಮುಸ್ಲಿಂ ಎನ್ನದೇ ಎಲ್ಲ ಸಮುದಾಯದವರು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಗರಗ ಪೊಲೀಸ್ ಠಾಣೆಯ ಹೆಚ್ಚುವರಿ ಪಿಎಸ್ಐ ಮಂಟೂರ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.