ಮೀರತ್:- ಹಾಪುರದ ಘರ್ ಮುಕ್ತೇಶ್ವರ ಪ್ರದೇಶದಲ್ಲಿ 20 ವರ್ಷದ ಯುವತಿಯ ಶವವನ್ನು ದೋಣಿಯಿಂದ ಗಂಗಾ ನದಿಗೆ ತೇಲಿಸಿ ಬಿಟ್ಟ ಆಘಾತಕಾರಿ ವಿಡಿಯೊ ಬೆಳಕಿಗೆ ಬಂದಿದೆ. ಇಬ್ಬರು ವ್ಯಕ್ತಿಗಳು ಬಟ್ಟೆಯಲ್ಲಿ ಸುತ್ತಿದ ಶವವನ್ನು ನದಿಗೆ ಎಸೆಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಬೆಂಗಳೂರಲ್ಲಿ ಮಳೆಗಾಲದಲ್ಲೂ ದುಬಾರಿಯಾದ ಎಳನೀರು: ಬೆಲೆ ಕೇಳಿದ್ರೆ ಶಾಕ್!
ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ಬಹದ್ದೂರ್ಗಢ ಪ್ರದೇಶದ ನಿವಾಸಿಯಾಗಿದ್ದು, ಜುಲೈ 26ರಂದು ಹಾವು ಕಡಿತದಿಂದ ಸಾವನ್ನಪ್ಪಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹಾವು ಕಡಿತದಿಂದ ಯಾರಾದರೂ ಸತ್ತರೆ, ಅವರ ದೇಹವನ್ನು ಗಂಗಾ ನದಿಯಲ್ಲಿ ತೇಲಿಸಿ ಬಿಟ್ಟರೆ ಅವರು ಮತ್ತೆ ಜೀವಂತವಾಗಿ ಬರುತ್ತಾರೆ ಎಂಬ ವಿಚಿತ್ರ ನಂಬಿಕೆ ಸ್ಥಳೀಯರಲ್ಲಿದೆ
ಪೊಲೀಸರು ಆಕೆಯ ಕುಟುಂಬ, ಗ್ರಾಮದ ಮುಖ್ಯಸ್ಥ ಮತ್ತು ಕೆಲವು ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದು ಎಂದು ದೃಢವಾಗಿದೆ. ಸ್ಥಳೀಯ ತಂತ್ರಿಯಿಂದ ಚಿಕಿತ್ಸೆ ಪಡೆದರೂ ಆಕೆ ಚೇತರಿಸಿಕೊಳ್ಳದಿದ್ದಾಗ, ಆಕೆಯ ಕುಟುಂಬವು ಮೂಢನಂಬಿಕೆಯಂತೆ ಆಕೆಯ ಶವವನ್ನು ಗಂಗಾ ನದಿಗೆ ತೇಲಿಸಿ ಬಿಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಸತ್ಯಾಂಶಗಳನ್ನು ದೃಢಪಡಿಸಿದ ನಂತರ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದರು. ಮತ್ತು ಆಕೆಯ ಸಾವಿನಲ್ಲಿ ಯಾವುದೇ ದುರುದ್ದೇಶವಿಲ್ಲದ ಕಾರಣ ಶವವನ್ನು ಹಿಂಪಡೆಯುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ
ಹಾವು ಕಚ್ಚಿದವರ ಶವಗಳನ್ನು ತೇಲಿಸಿ ಬಿಡುವ ಅಭ್ಯಾಸ ಸ್ಥಳೀಯ ಹಳ್ಳಿಗಳಲ್ಲಿ ಹೊಸತೇನಲ್ಲ. ಮೇ ತಿಂಗಳಲ್ಲಿ ಬುಲಂದ್ ಶಹರ್ನ ಜಹಾಂಗೀರಾಬಾದ್ ಪ್ರದೇಶದಲ್ಲಿ ಹಾವು ಕಚ್ಚಿದ ನಂತರ 22 ವರ್ಷದ ವ್ಯಕ್ತಿಯ ದೇಹವನ್ನು ಎರಡು ದಿನಗಳ ಕಾಲ ಗಂಗಾ ನದಿಯಲ್ಲಿ ಮುಳುಗಿಸಲಾಗಿತ್ತು. ದೇಹವು ಕೊಳೆಯಲು ಪ್ರಾರಂಭಿಸಿದ ನಂತರವೇ ದಹನ ಮಾಡಲಾಗಿತ್ತು.