ಬೀದರ್:- ಜನರು ಜೀವಂತ ಮೀನು ಗಳನ್ನ ನುಂಗುವುದಕ್ಕಾಗಿಯೇ ನೂರಾರು ಸಂಖ್ಯೆಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಜನ ಜಂಗುಳಿ ಸೇರಿದ ದೃಶ್ಯ ನಗರದ ಓಲ್ಡ್ ಸಿಡಿ ಹಾಗೂ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಣಣದಲ್ಲಿ ಜರುಗಿದೆ.
ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ – ಸಚಿವ ಜಿ ಪರಮೇಶ್ವರ್!
ಮಿರಗ ಮಳೆ ಆರಂಭವಾಗುವ ಈ ದಿನದಂದೂ ಆರ್ಯುವೇದ ಔಷಧಿಯನ್ನ ಜೀವಂತ ಮೀನಿನ ಬಾಯಿಯೊಳಗೆ ಹಾಕಿ ಅದನ್ನ ಜೀವಂತವಾಗಿ ನುಂಗಿದರೆ ಕೆಮ್ಮು, ಧಮ್ಮು, ಕಮಾಲೇ, ಅಸ್ತಮಾದಂತಾ ಖಾಯಿಲೆಗಳು ವಾಸಿಯಾಗುತ್ತದೆ ಎಂದು ಜನರು ನಂಬಿಕೊಂಡಿದ್ದು, ಅದರಂತೆ ಇದು ನೂರಾರು ವರ್ಷದಿಂದ ನಡೆದುಕೊಂಡು ಬರುತ್ತಿದೆ.
ಶತಮಾನದಿಂದ ಇಲ್ಲಿ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಪ್ರತಿವರ್ಷ ಜೂನ್ ತಿಂಗಳು ಆರಂಭದಲ್ಲಿ ಅಂದರೇ ಮಿರುಗು ಮಳೆಯಾದ ತಕ್ಷಣ ಇಲ್ಲಿ ಅಸ್ತಮಾ, ಕೆಮ್ಮಿ ಕಾಮಾಲೆ ರೋಗಗಳು ಇದ್ದವರು ಇಲ್ಲಿಗೆ ಬಂದು ಜಿವಂತ ಮೀನುಗಳನ್ನ ನುಂಗಿ ತಮ್ಮ ಕಾಯಿಲೆಗಳನ್ನ ಕಡಿಮೆಮಾಡಿಕೊಂಡು ಹೋಗುತ್ತಾರೆ. ಹುಮ್ನಾಬಾದ್ ಪಟ್ಟಣದ ಶರಣಪ್ಪ ಜಗದಾಳೆ ಕುಟುಂಬದವರು ಆರ್ಯುವೇದಿಕ ಔಷಧಿಯನ್ನ ಜೀವಂತ ಮೀನುಗಳ ಬಾಯಿಯಲ್ಲಿ ಹಾಕಿ ಅಸ್ತಮಾ, ಕಾಮಾಲೆಯಂತ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಮೀನು ನುಂಗಿಸಿ ಕಾಯಿಲೆಯನ್ನ ಕಡಿಮೆ ಮಾಡಿಸುವ ಕೆಲಸವನ್ನ ಮಾಡುತ್ತಿದ್ದಾರೆ.
ವರ್ಷದಲ್ಲಿ ಒಂದು ಸಲ ಮಾತ್ರ ಇವರು ಜನರಿಗೆ ಮೀನಿನಲ್ಲಿ ಆರ್ಯುವೇದಿಕ ಔಷದಿಯನ್ನ ಮೀನಿನ ಬಾಯಿಯಲ್ಲಿ ಹಾಕಿ ಜೀವಂತ ಮೀನುಗಳನ್ನ ನುಂಗಿಸುತ್ತಾರೆ. ಹೀಗೇ ಜೀವಂತ ಮೀನುಗಳನ್ನ ನುಂಗಿಸುವುದರಿಂದ ಕೆಮ್ಮ, ದಮ್ಮು, ಕಾಮಾಲೆಯಂತಹ ರೋಗಿಗಳು ಒಂದೇ ವಾರದಲ್ಲಿ ಕಡಿಮೆಯಾಗುತ್ತದೆ ಎಂದು ಜನರು ಕೂಡ ನಂಬಿಕೊಂಡಿದ್ದು, ಶತಮಾನದಿಂದ ಇಲ್ಲಿ ಮೀನು ನುಂಗಿಸುವ ಕಾರ್ಯ ನಡೆಯುತ್ತಿದೆ.