ರಾಯಚೂರು : ಎಲ್ಲದರಲ್ಲೂ ಚಿಲ್ಲರೆ ರಾಜಕಾರಣ ಮಾಡುವುದು, ಜನರನ್ನು ತಪ್ಪುದಾರಿಗೆ ಎಳೆಯುವುದು ಆಗುವುದಿಲ್ಲ ಸಿದ್ದರಾಮಯ್ಯನವರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದೇವದುರ್ಗದಲ್ಲಿ ಹೇಳಿದರು. ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವರು ಗಣರಾಜ್ಯೋತ್ಸವಕ್ಕೆ ರಾಜ್ಯದ ಟ್ಯಾಬ್ಲೋ ನಿರಾಕರಿಸಿರುವ ವಿಚಾರ ಮಾತನಾಡುತ್ತಾ, ಪ್ರತೀವರ್ಷ ಎಲ್ಲಾ ರಾಜ್ಯಗಳಿಗೆ ಕೊಡುವುದಿಲ್ಲ, ಒಂದು ಬಿಟ್ಟು ಒಂದು ಕೊಡುವುದು ಪದ್ದತಿ, ಸಿದ್ದರಾಮಯ್ಯ ಅವರಿಗೆ 2006 ರಲ್ಲಿ ಕನ್ನಡದ ಸ್ವಾಭಿಮಾನ ನೆನಪಾಗಿರಲಿಲ್ವಾ.
2006ರ ಜನವರಿಯಲ್ಲಿ ಅವರದೇ ಸರ್ಕಾರವಿತ್ತು, ಸಮ್ಮಿಶ್ರ ಸರ್ಕಾರವಿತ್ತು. 14 ವರ್ಷದಲ್ಲಿ 10 ಬಾರಿ ಅತಿಹೆಚ್ಚು ಅವಕಾಶ ಸಿಕ್ಕಿದೆ, ಅಂದ್ರೆ ನಾವೇ ಹೆಚ್ಚು ಬಾರಿ ಅವಕಾಶ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗಲೇ ಅವಕಾಶ ಸಿಕ್ಕಿದೆ. 2006, 2007,2009,2010 ರಲ್ಲಿ ಯಾರ ಸರ್ಕಾರವಿತ್ತು ಯಾಕೆ ಅವಕಾಶ ಸಿಕ್ಕಿರಲಿಲ್ಲ. ಸಿದ್ದರಾಮಯ್ಯನವರು ಪತ್ರ ಬರೆದಿದ್ದರಲ್ಲಾ 2014 ರಲ್ಲಿ ನಮ್ಮ ಸರ್ಕಾವಿತ್ತು ತಪ್ಪು ಮಾಡಿದ್ದೇವೆ ಅಂತ ಪತ್ರ ಬರೆಯಿರಿ ನೋಡೋಣ.
Gmail Accounts: ಜಿ-ಮೇಲ್ ಖಾತೆ ಹೊಂದಿದ್ದು ಬಳಸುತ್ತಿಲ್ಲವೆಂದರೆ ಈ ಸ್ಟೋರಿ ಓದಲೇಬೇಕು: ಶಾಕಿಂಗ್ ನ್ಯೂಸ್!
ಈ ವಿಚಾರದಲ್ಲಿ ಚಿಲ್ಲರೆ ರಾಜಕಾರಣ ಮಾಡುವುದು ಸರಿಯಲ್ಲ. ಅದಕ್ಕೊಂದು ಸಮಿತಿಯಿದೆ ಅದು ಸಾಮಾನ್ಯವಾಗಿ 40- 50% ರಾಜ್ಯಗಳನ್ನ ಆಯ್ಕೆ ಮಾಡುತ್ತದೆ. ಅಯ್ಕೆ ಮಾಡುವ ಸಂದರ್ಭದಲ್ಲಿ ರಾಜ್ಯಕ್ಕೆ 10 ಬಾರಿ ಸಿಕ್ಕಿದೆ ಬೇರೆ ರಾಜ್ಯಕ್ಕೆ ಸಿಕ್ಕಿಲ್ಲ. ಈ ಬಾರಿ ಸಿಕ್ಕವರಿಗೆ ಮುಂದಿನ ವರ್ಷ ಸಿಗಲ್ಲ ಇದು ಸಾಮಾನ್ಯ ಪ್ರಕ್ರಿಯೆ. ಟೆಕ್ನಾಲಜಿ ಬೆಳೆದಿದೆ ಯಾವುದು ಸತ್ಯ ಅನ್ನೋದನ್ನ ಜನ ಅಂಗೈಯಲ್ಲಿ ತಿಳಿದುಕೊಳ್ಳುತ್ತಾರೆ. ಹಾಗಾಗಿ ಎಲ್ಲದರಲ್ಲೂ ಚಿಲ್ಲರೆ ರಾಜಕಾರಣ ಮಾಡುವುದು, ಜನರನ್ನು ತಪ್ಪುದಾರಿಗೆ ಎಳೆಯುವುದು ಆಗುವುದಿಲ್ಲ ಎಂದರು.