ಗದಗ:- ಗೌರಿ ಹುಣ್ಣಿಮೆ ಹಿನ್ನೆಲೆ ಗದಗ ಹೊಸ ಬಸ್ ನಿಲ್ದಾಣ ಜನರಿಂದ ತುಂಬಿ ತುಳುಕ್ತಿದೆ. ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳೋ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಬಸ್ ಗಳಿಗಾಗಿ ಪ್ರಯಾಣಿಕರು ಕಾಯ್ದು ನಿಂತು ಸುಸ್ತಾಗಿದ್ದಾರೆ. ಎಷ್ಟೇ ಬಸ್ ಗಳು ಬಂದ್ರೂ ಕೂಡಾ ಪುಲ್ ರಶ್ ಆಗಿವೆ. ಬಸ್ ಪ್ಲಾಟ್ ಫಾರಂ ಗೆ ಬರೋ ಮುನ್ನವೇ ಜನರು ಮುಗಿಬೀಳ್ತಿದ್ದಾರೆ.
ಶಕ್ತಿ ಯೋಜನೆ ಎಫೆಕ್ಟ್ ನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಬಂದಿದ್ರಿಂದಾಗಿ ಬಸ್ ಗಳಲ್ಲಿ ಸೀಟ್ ಗಳಿಗಾಗಿ ಪರದಾಟ ನಡೆದಿದೆ. ಸೀಟ್ ಗಳಿಲ್ಲದೇ ನಿಂತು ಹೋಗೋ ಪರಿಸ್ಥಿತಿ ಎದುರಾಗಿದೆ.