ರಾಮನಗರ:-ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ ರೈತರ ಬೆಳೆಗಳು ನಾಶವಾಗ್ತಿದೆ. ರೈತರು ಸಹ ಸಾವನ್ನಪ್ಪಿದ್ದರು. ಇದಕ್ಕಾಗಿ ಈಗ ಸರ್ಕಾರ ಎರಡು ಕಾಡಾನೆಗಳನ್ನ ಸೆರಡಯಿಡಿಯಲು ಅನುಮತಿ ನೀಡಿದೆ. ಇಂದು ಕೆಂಗಲ್ ಆಂಜನೇಯನಿಗೆ ಪೂಜೆ ಸಲ್ಲಿಸಿ ಕಾಡಾನೆ ಕಾರ್ಯಾಚರಣೆಗೆ ಚಾಲನೆ ಸಿಕ್ಕಿದೆ. ಈ ಕುರಿತ ವರದಿ ಇಲ್ಲಿದೆ..
Hubballi: ವಿಧಾನ ಪರಿಷತ್ ಶಾಸಕರ ಹಕ್ಕುಚ್ಯುತಿ: ಕ್ರಮ ಜರುಗಿಸಲು ಸಭಾಪತಿಗೆ ಶಾಸಕರ ಮನವಿ!
ರಾಮನಗರ ಜಿಲ್ಲೆಯಲ್ಲಿ ಕಳೆದ ಹತ್ತುಹಲವು ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ತೆಂಗಿನಕಲ್ಲು, ಅಚ್ಚಲು, ಕಬ್ಬಾಳು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪ್ರತಿದಿನವೂ ಸಹ ರೈತರ ರಾಗಿ, ಬಾಳೆ, ಬತ್ತ, ಹಲಸು ಸೇರಿ ಹಲವು ಬೆಳೆಗಳು ನಾಶವಾಗ್ತಿದೆ. ಇದರಿಂದಾಗಿ ರೈತರು ಬೆಳೆಗೆ ಬೆಲೆಯೇ ಇಲ್ಲದಂತಾಗಿದೆ. ಕಳೆದ ಕೆಲದಿನಗಳ ಹಿಂದೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಸಹ ಅರಣ್ಯಾಧಿಕಾರಿಗಳ ಸಭೆ ನಡೆಸಿದ್ದರು. ಇದರ ಜೊತೆಗೆ ರೈತರು ಸಹ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಎರಡು ಕಾಡಾನೆ ಸೆರೆಗೆ ಮಡಿಕೇರಿಯಿಂದ 6 ಸಾಕಾನೆಗಳು ಬಂದಿವೆ.
ಮಹೇಂದ್ರ, ಭೀಮ, ಪ್ರಶಾಂತ, ಸುಗ್ರೀವ, ಧನಂಜಯ, ಹರ್ಷ ಬಂದಿದ್ದು ಮೊದಲಿಗೆ ಕೆಂಗಲ್ ಆಂಜನೇಯನಿಗೆ ಪೂಜೆ ಸಲ್ಲಿಸಿ ಇಂದಿನಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಶಾಸಕ ಸಿ.ಪಿ.ಯೋಗೇಶ್ವರ್, ಪತ್ನಿ ಶೀಲಾ ಜೊತೆಗೆ DFO ರಾಮಕೃಷ್ಣಪ್ಪ ಹಾಗೂ ರೈತರು ಆನೆಗಳಿಗೆ ಪೂಜೆ ಸಲ್ಲಿಸಿದರು. ಜಿಲ್ಲೆಯಲ್ಲಿ ಈಗ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ, ಸದ್ಯಕ್ಕೆ ಎರಡು ಕಾಡಾನೆ ಹಿಡಿಯಲು ಅನುಮತಿ ಸಿಕ್ಕಿದೆ ಎಂದು DFO ತಿಳಿಸಿದರು. ಇನ್ನು ಯೋಗೇಶ್ವರ್ ಮಾತನಾಡಿ ಕಾಡಾನೆ ಸೆರೆಯಿಡಿಯುವುದು ಶಾಶ್ವತ ಪರಿಹಾರ ಅಲ್ಲ, ಆದರೆ ತಾತ್ಕಾಲಿಕವಾಗಿ ಈ ಕ್ರಮಕೈಗೊಳ್ಳಲಾಗಿದೆ. ಮುಂದೆ ಆನೆ ಶಿಬಿರ ಮಾಡಲು ಸಹ ಕ್ರಮವಹಿಸಲಾಗುವುದು ಎಂದರು.
ಒಟ್ಟಾರೆ ಕನಕಪುರದ ಹೆಗ್ಗನೂರುದೊಡ್ಡಿಯಲ್ಲಿ ಓರ್ವ ರೈತ ಸಾವನ್ನಪ್ಪುತ್ತಿದ್ದಂತೆ ಎಚ್ಚರಿಕೆ ವಹಿಸಿರುವ ಅರಣ್ಯ ಇಲಾಖೆ ಈಗ ಕಾಡಾನೆಗಳ ಸೆರೆಗೆ ಅನುಮತಿ ನೀಡಿದೆ. ಆದರೆ ಮತ್ತೆ ಕಾಡಿನಿಂದ ಆನೆಗಳು ಬರಲಿವೆ, ಹಾಗಾಗಿ ಶಾಶ್ವತ ಪರಿಹಾರದ ಬಗ್ಗೆ ಚಿಂತನೆ ನಡೆಸಬೇಕಿದೆ.