ಕ್ಯಾಲಿಫೋರ್ನಿಯಾ: ಲಾಸ್ ಏಂಜಲೀಸ್ನಲ್ಲಿ ಸಂಭವಿಸಿದೆ ಭೀಕರ ಕಾಡ್ಗಿಚ್ಚಿನಿಂದ ಜನ ಕಂಗಲಾಗಿದ್ದಾರೆ. ಪರಿಣಾಮ ಭಾರೀ ಅಲ್ಲೋಲ ಕಲ್ಲೋಲ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಬರೋಬ್ಬರಿ 30000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.
ದಕ್ಷಿಣ ಕ್ಯಾಲಿಫೋರ್ನಿಯಾಗೆ ಅಪ್ಪಳಿಸಿದ ಭೀಕರ ಗಾಳಿಯಿಂದಾಗಿ ಬೆಂಕಿ ಎಲ್ಲೆಂದರಲ್ಲಿ ಹರಡಿಕೊಂಡಿದೆ. ಆರಂಭದಲ್ಲಿ 20 ಎಕರೆ ಪ್ರದೇಶದಲ್ಲಿ ಕಾಣಿಸಿಕೊಂಡಿ ಬೆಂಕಿ ಕೆಲವೇ ಗಂಟೆಗಳಲ್ಲಿ 1,200 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಇದರಿಂದಾಗಿ 13,000 ಕ್ಕೂ ಹೆಚ್ಚು ಕಟ್ಟಡಗಳು ಮತ್ತು 10,000 ಮನೆಗಳು ಅಪಾಯಕ್ಕೆ ಗುರಿಯಾಗಿದೆ. 250ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ಹೆಲಿಕಾಪ್ಟರ್ಗಳು, ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ಬೆಂಕಿ ನಂದಿಸಲು ನಿಯೋಜಿಸಲಾಗಿದ್ದು, 30000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಾಸ್ ಏಂಜಲೀಸ್ ಅಗ್ನಿಶಾಮಕ ಮುಖ್ಯಸ್ಥ ಕ್ರಿಸ್ಟಿನ್ ಕ್ರೌಲಿ ಅವರು 30,000 ಕ್ಕೂ ಹೆಚ್ಚು ಜನರು ಈಗಾಗ್ಲೇ ಸ್ಥಳಾಂತರಿಸಲಾಗಿದೆ. 13,000 ಕ್ಕೂ ಹೆಚ್ಚು ಕಟ್ಟಡಗಳು ಮತ್ತು 10,000 ಮನೆಗಳು ಅಪಾಯದಲ್ಲಿದೆ. ಆದರೆ ಇಲ್ಲಿಯವರೆಗೆ ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದಿದ್ದಾರೆ.