ಹುಬ್ಬಳ್ಳಿ “ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವತಿಯಿಂದ ಇಲ್ಲಿನ ರೈಲ್ವೆ ಆಫೀಸರ್ಸ್ ಕ್ಲಬ್ನಲ್ಲಿ ಅಖಿಲ ಭಾರತ ಪಿಂಚಣಿ ಅದಾಲತ್- 2024ನ್ನು ಆಯೋಜಿಸಲಾಗಿತ್ತು. ಮುಖ್ಯ ಕಾರ್ಮಿಕ ಅಧಿಕಾರಿ ಕೆ. ಆಸೀಫ್ ಹಫೀಜ್ ಮಾತನಾಡಿ, ರೈಲ್ವೆ ಇಲಾಖೆಯ ಉನ್ನತಿಕರಣದಲ್ಲಿ ನಿವೃತ್ತ ನೌಕರರ ಶ್ರಮ ಅಧಿಕವಾಗಿದೆ. ಇಲಾಖೆಯು ನಿವೃತ್ತ ನೌಕರರ ಹಿತ ಕಾಯುತ್ತದೆ ಎಂದರು.
ಪ್ರತಿ ಪಿಂಚಣಿದಾರರ ಸಮಸ್ಯೆ ಪರಿಹರಿಸಲು ರೈಲ್ವೆ ಇಲಾಖೆಯಿಂದ ದೇಶದಾದ್ಯಂತ ರಾಷ್ಟ್ರೀಯ ಪಿಂಚಣಿ ಅದಾಲತ್ ಆಯೋಜನೆ ಮಾಡಲಾಗಿದೆ. ನಿವೃತ್ತರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ, ಅವರ ಹಿತ ಕಾಯಲಾಗುತ್ತದೆ ಎಂದು ತಿಳಿಸಿದರು.ನಿವೃತ್ತಿ ಸಂದರ್ಭದಲ್ಲಿ ಸೇವಾ ದಾಖಲೆ, ಪಿಪಿಒ (ನಿವೃತ್ತ ಸೇವಾ ಪ್ರಮಾಣ ಪತ್ರ ), ಸೆಟಲ್ಕೆಂಟ್ ಶೀಟ್, ಪೆನ್ನನ್ ವಿವರಣಾ ಪತ್ರ, ಕೌಟುಂಬಿಕ ಪೆನ್ನನ್ ಸದಸ್ಯರ ವಿವರ ಸೇರಿದಂತೆ ಅನೇಕ ದಾಖಲೆಗಳ ಮುದ್ರಿತ ಪ್ರತಿಗಳನ್ನು ನೀಡಲಾಗುವುದು ಎಂದರು.
ವಿಭಾಗೀಯ ರೈಲ್ವೆ ಹಿರಿಯ ವ್ಯವಸ್ಥಾಪಕ ಡಾ. ಅನೂಪ್ ಮಾತನಾಡಿ, ಆರ್ಥಿಕ ಮತ್ತು ಕಾರ್ಮಿಕ ಕಲ್ಯಾಣ ವಿಭಾಗಗಳ ಸಮನ್ವಯ ಕಾರ್ಯದ ಮೂಲಕ ಪಿಂಚಣಿದಾರ ಸಮಸ್ಯೆಗಳನ್ನು ಪರಿಹರಿಸಿ, ವ್ಯರ್ಥ ಅಲೆದಾಟ, ಅನಗತ್ಯ ದಾಖಲೆ ಪಡೆಯುವುದನ್ನು ತಪ್ಪಿಸಲಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ರೈಲ್ವೆ ನೌಕರರ ಸಂಘದ ಕಾರ್ಯದರ್ಶಿ ಎಸ್.ಎಸ್. ಬಳ್ಳಾರಿ ಮಾತನಾಡಿ, ಕೌಟುಂಬಿಕ ಪಿಂಚಣಿ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದರು. ಈ ಅದಾಲತ್ನಲ್ಲಿ ಸಹಾಯಕ ಕಾರ್ಮಿಕ ಅಧಿಕಾರಿ ತಿರುಮಲ ರೆಡ್ಡಿ ಭಾಗವಹಿಸಿದ್ದರು. ಅದಾಲತ್ ನಲ್ಲಿ ಒಟ್ಟು 13 ಪ್ರಕರಣಗಳನ್ನು ಪರಿಹಾರ ಮಾಡಲಾಗಿದ್ದು, ಹೊಸದಾಗಿ 3 ಪ್ರಕರಣಗಳ ದಾಖಲಾತಿ ಮಾಡಲಾಯಿತು.