ಪೀಣ್ಯ ದಾಸರಹಳ್ಳಿ:’ ಕೇಂದ್ರ ಸಚಿವರಾಗಿ ಅನುಭವ ಹೊಂದಿರುವ ರಾಜಕಾರಣಿ ಶೋಭಾ ಕರಂದ್ಲಾಜೆ ಅವರನ್ನು ನಮ್ಮ ಉತ್ತರ ಲೋಕಸಭೆಯ ಅಭ್ಯರ್ಥಿಯಾಗಿ ಕೊಟ್ಟಿದ್ದಾರೆ ನಾವು ಮತ್ತು ಜೆಡಿಎಸ್ ಕಾರ್ಯಕರ್ತರು ಸೇರಿ ಅಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಶೆಟ್ಟಿಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ಬಿ. ಸುರೇಶ್ ನೇತೃತ್ವದಲ್ಲಿ ಆಯೋಜಿಸಲಾದ ಮನೆ ಮನೆಗೆ ಪ್ರಚಾರ ಕಾರ್ಯಕ್ಕೆ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆಯಲ್ಲಿ ತುಂಬಾ ಕಾಲು ಸೆಳೆತದಿಂದ ಬಳಲುತ್ತಿದ್ದೀರಾ!? – ತಡೆಗಟ್ಟಲು ಹೀಗೆ ಮಾಡಿ!
ನಮ್ಮ ಕಾರ್ಯಕರ್ತರು ಬೆಳಿಗ್ಗೆ ಎರಡು ಗಂಟೆ ಮತ್ತು ಸಂಜೆ ಮೂರು ಗಂಟೆಗಳ ಕಾಲ ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು ಈ ದೇಶದ ಅಭಿವೃದ್ಧಿ ಮತ್ತು ಸುಭದ್ರತೆಗೋಸ್ಕರ ಎನ್ ಡಿ ಎ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬರಬೇಕು’ಎಂದರು.
ದೇವೇಗೌಡರು ಸಹ ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿ ಕೂಟದಲ್ಲಿ ಭಾಗಿಯಾಗಿದ್ದಾರೆ, ಅವರ ಅನುಭವವನ್ನು ಎನ್ ಡಿ ಎ ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮೈಸೂರಿಗೆ 14ರಂದು ಪ್ರಧಾನಿ ನರೇಂದ್ರ ಮೋದಿಯವರು ಬರುತ್ತಿದ್ದಾರೆ ಆಗ ಮೋದಿಯವರೊಟ್ಟಿಗೆ ದೇವೇಗೌಡರು ಇದ್ದು ಈ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದರು.
ರಾಜ್ಯದಲ್ಲಿ ತಾರತಮ್ಯ ಮಾಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹೊಗೆಯಬೇಕು. ಉದಾಹರಣೆಗೆ ದಲಿತರಿಗೆ ಮೀಸಲಿಟ್ಟಿದಂತಹ 10 ಸಾವಿರ ಕೋಟಿ ರೂ ಗಳನ್ನು ದಲಿತರಿಗೆ ಮೋಸ ಮಾಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ. ಅಲ್ಪಸಂಖ್ಯಾತರಿಗೆ ವರ್ಷಕ್ಕೆ 10 ಕೋಟಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸ ಈ ಸರ್ಕಾರ ಮಾಡುತ್ತಿದೆ’ ಎಂದು ಆರೋಪ ಮಾಡಿದರು.
ಈ ವೇಳೆ ಶಾಸಕ ಎಸ್. ಮುನಿರಾಜು ಅವರು ಮಲ್ಲಸಂದ್ರ ವಾರ್ಡ್ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ, ಬಾಗಲಗುಂಟೆ ವಾರ್ಡ್ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ಮತ್ತು ದಾಸರಹಳ್ಳಿ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನೆ ಮನೆ ಪ್ರಚಾರಕ್ಕೆ ಚಾಲನೆ ನೀಡಿದರು.