ಬ್ಯಾಂಕಾಕ್: ಧಾರ್ಮಿಕ ಕಾರಣಗಳಿಂದ ವಿಶ್ವದಲ್ಲಿ ಯುದ್ಧಗಳು, ಹತ್ಯೆಗಳು ನಡೆಯುತ್ತಿದೆ. ಮೂಲಭೂತವಾದಿಗಳ ದಾಳಿ, ಧರ್ಮದ ಕಾರಣಕ್ಕಾಗಿ ಭಯೋತ್ಪಾದಕ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಧರ್ಮ ಸಂಘರ್ಷದ ನಡುವೆ ಥಾಯ್ಲೆಂಡ್ ನೂತನ ಪ್ರಧಾನಿ ಸ್ರೆತ್ಥಾ ಥಾವಿಸಿನ್ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಸದ್ಯ ವಿಶ್ವ ಎದುರಿಸುವ ಅಶಾಂತಿಯ ವಾತಾವರಣ ನಿರ್ಮೂಲನೆಯಾಗಿ ಶಾಂತಿ ನೆಲಸಲು ಮಹತ್ವದ ಸಲಹೆ ನೀಡಿದ್ದಾರೆ. ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದಿದ್ದಾರೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ವಿಶ್ವ ಹಿಂದೂ ಕಾಂಗ್ರೆಸ್ ಸಮ್ಮೇಳನದಲ್ಲಿ ಥಾಯ್ಲೆಂಡ್ ಪ್ರಧಾನಿ ಜಗತ್ತಿಗೆ ಮಹತ್ವದ ಸಂದೇಶ ಸಾರಿದ್ದಾರೆ. ಹಿಂದೂ ಜೀವನ ಮೌಲ್ಯಗಳಾದ ಸತ್ಯ, ನ್ಯಾಯ, ಸಹಿಷ್ಣುತೆ , ಸಹಬಾಳ್ವೆ, ಅಹಿಂಸೆಗಂದ ಮಾತ್ರ ವಿಶ್ವದಲ್ಲಿ ಶಾಂತಿ ನಲೆಸಲಿದೆ. ಹಿಂದೂ ಸಮಾಜ ಅಭಿವೃದ್ಧಿಪರ ಹಾಗೂ ಪ್ರತಿಭಾನ್ವಿತರ ಒಕ್ಕೂಟವಾಗಿದೆ. ಕಾರ್ಯಕ್ರಮದ ಉದ್ಘಾಟನೆಗೆ ಸ್ರೆತ್ಥಾ ಥಾವಿಸನ್ ಆಗಮಿಸಬೇಕಿತ್ತು. ಆದರೆ ಅಂತಿಮ ಹಂತದಲ್ಲಿ ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಪ್ರದಾನಿ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗಿತ್ತು.