ರಾಯಚೂರು: ಪಿಡಿಓ ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಪ್ರತಿಭಟನೆ ನಡೆಸಿದರು. ಸಿಂಧನೂರು ಪಟ್ಟಣದ ಪ್ರಾಥಮಿಕ ದರ್ಜೆಯ ಡಿಗ್ರಿ ಕಾಲೇಜಿನಲ್ಲಿ ಪಿಡಿಒ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆಂದು 35 ಕೊಠಡಿಗಳ ಮಾಡಿದ್ದು, ಒಂದು ಕೊಟ್ಟಡಿಗೆ 24 ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು.
ರೇಷನ್ ಕಾರ್ಡ್ ರದ್ದು ವಿಚಾರ : ಸರ್ಕಾರದ ವಿರುದ್ಧ ಹೆಚ್ ಡಿಕೆ ಕಿಡಿ
ಪ್ರತಿ ಕೊಠಡಿಗೆ ಎರಡು ಓಎಂಆರ್ (OMR ) ಶೀಟ್ ಮತ್ತು ಪ್ರಶ್ನೆ ಪತ್ರಿಕೆ ಪೇಪರ್ ತೆಗೆದುಕೊಂಡು ಹೋಗಬೇಕು. ಆದರೆ 24 ಅಭ್ಯರ್ಥಿಗಳಿಗೆ ಪೇಪರ್ ಗಳ. ಹಂಚದೇ ಕೇವಲ 12 ಅಭ್ಯರ್ಥಿಗಳಿಗೆ ಮಾತ್ರ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಆಕ್ರೋಶಗೊಂಡ ಅಭ್ಯರ್ಥಿಗಳು ಪರೀಕ್ಷೆ ಬರೆಯದೆ ಪ್ರತಿಭಟನೆ ನಡೆಸಿದರು. ಹಂಚಿಕೆ ಮಾಡೋದಾದರೆ ಎಲ್ಲರಿಗೆ ಹಂಚಿಕೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಸಿಂಧನೂರು ಪೊಲೀಸರು ಆಗಮಿಸಿದ್ದು, ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದವೂ ನಡೆಯಿತು.