ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಿಸ್ವಾರ್ಥ ನಿರ್ಧಾರ ತೆಗೆದುಕೊಂಡರು. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸುಮಾರು 94 ಲಕ್ಷ ರೂಪಾಯಿ ಮೌಲ್ಯದ 30 ಆಸನಗಳ ವಿಐಪಿ ಹಾಸ್ಪಿಟಾಲಿಟಿ ಬಾಕ್ಸ್ ಅನ್ನು ತ್ಯಾಗ ಮಾಡಿದರು.
ತನಗಾಗಿ ಮತ್ತು ತನ್ನ ಅತಿಥಿಗಳಿಗಾಗಿ ಐಷಾರಾಮಿ ಆಸನಗಳನ್ನು ಆನಂದಿಸುವ ಬದಲು, ನಖ್ವಿ ಪ್ರೀಮಿಯಂ ಟಿಕೆಟ್ಗಳನ್ನು ಮಾರಾಟ ಮಾಡಲು ಮತ್ತು ಆದಾಯವನ್ನು ಕರಾಚಿ, ಲಾಹೋರ್ ಮತ್ತು ಪಿಂಡಿಯಲ್ಲಿನ ಕ್ರಿಕೆಟ್ ಕ್ರೀಡಾಂಗಣಗಳ ನವೀಕರಣಕ್ಕೆ ಬಳಸಲು ನಿರ್ಧರಿಸಿದರು.
ಕಂಕುಳಿನ ಬೆವರಿನಿಂದ ಕೆಟ್ಟ ವಾಸನೆ ಬರ್ತಿದ್ಯಾ..? ಹಾಗಿದ್ರೆ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ!
ಭದ್ರತಾ ಕಾರಣಗಳಿಂದ ಈ ಬಾರಿಯ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಹಾಗಾಗಿ ದುಬೈನಲ್ಲಿ ನಡೆಯುವ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಉತ್ತಮ ಆಸನ, ವಿಶೇಷ ಸೌಕರ್ಯವುಳ್ಳ ಬಾಕ್ಸ್ನಲ್ಲಿ ತಮ್ಮ ಕುಟುಂಬ,
ಆಪ್ತರೊಂದಿಗೆ ಕುಳಿತು ವೀಕ್ಷಿಸಲು ನಖ್ವಿ ಅವರಿಗೆ ಸುಮಾರು 95 ಲಕ್ಷ ರೂ. (4 ಲಕ್ಷ ದುಬೈ ಕರೆನ್ಸಿ) ಬೆಲೆಯ 30 ವಿಐಪಿ ಆಸನದ ಟಿಕೆಟ್ಗಳನ್ನು (VIP box Tickets) ನೀಡಲಾಗಿತ್ತು. ಆದ್ರೆ ಈ ಟಿಕೆಟ್ಗಳನ್ನ ಪಿಸಿಬಿ ಅಧ್ಯಕ್ಷ ಬರೋಬ್ಬರಿ 3.5 ಕೋಟಿ ರೂ. (ಸುಮಾರು 4 ಲಕ್ಷ ಡಾಲರ್)ಗೆ ಮಾರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಐಪಿ ಟಿಕೆಟ್ಗಳನ್ನು ಮಾರಾಟ ಮಾಡಿಕೊಂಡಿರುವ ನಖ್ವಿ ಅಭಿಮಾನಿಗಳೊಂದಿಗೆ ಕುಳಿತು ಸಾಮಾನ್ಯರಂತೆ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಟಿಕೆಟ್ ಮಾರಾಟ ಮಾಡಿದ ಹಣವನ್ನ ಕರಾಚಿ, ಲಾಹೋರ್ ಮತ್ತು ಪಾಕಿಸ್ತಾನದ ಇತರೇ ಕ್ರೀಡಾಂಗಣಗಳ ನವೀಕರಣಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.