ಹುಬ್ಬಳ್ಳಿ: ಮುಡಾ ಕೇಸನ್ನು ಏಕಸದಸ್ಯ ಪೀಠ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರಾಗಿದ್ದು, ಸಿಎಂ ಗೌರವ ಕಡಿಮೆ ಆಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮುಡಾ ಪ್ರಕರಣದಲ್ಲಿ ಸಿಎಂಗೆ ವಿಚಾರಣೆ ಬಗ್ಗೆ ಮಾತನಾಡಿ,
ಆ ಕೇಸನ್ನು ಏಕಸದಸ್ಯ ಪೀಠ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರಾಗಿದ್ದು, ಸಿಎಂ ಗೌರವ ಕಡಿಮೆ ಮಾಡಿದೆ. ಇತರ ಹಲವಾರು ಪ್ರಕರಣಗಳು ಇವೆ. ಸರ್ಕಾರಿ ನೌಕರರು ರಾಜಕೀಯ ಒತ್ತಡದಿಂದ ಕುಗ್ಗಿದ್ದಾರೆ. ಅವರಿಗೆ ಕಾನೂನುಬಾಹಿರ ಕೆಲಸ ಮಾಡಲು ಒತ್ತಡ ಇದೆ. ನಮ್ಮ ಶಿಗ್ಗಾಂವಿ ಕ್ಷೇತ್ರದಲ್ಲಿ ಸಹ ಹೀಗೆ ಆಗುತ್ತಿದೆ.
Driving License ಕಳೆದು ಹೋಗಿದ್ಯಾ.? ಹಾಗಿದ್ರೆ ಮರಳಿ ಪಡೆಯಲು ಹೀಗೆ ಮಾಡಿ ಸಾಕು
ಶಾಲೆಯ ಶಿಕ್ಷಕರಿಗೆ ಮಂಥ್ಲಿ ಫಿಕ್ಸ್ ಮಾಡಲು ಹೊರಟಿದ್ದಾರೆ. ಇದಕ್ಕಿಂತ ಅಧಿಪತನ ಏನು ಬೇಕು ಎಂದು ಪ್ರಶ್ನಿಸಿದರು. ಗುತ್ತಿಗೆದಾರರು ನಮ್ಮ ಮೇಲೆ ಆರೋಪ ಮಾಡಿದ್ದರು. ಇವತ್ತಿನವರಗೆ ಏನೂ ಸಾಬೀತು ಮಾಡಲು ಆಗಲಿಲ್ಲ. ಅದನ್ನ ರಾಜಕೀಯವಾಗಿಯೂ ಬಳಕೆ ಮಾಡಿಕೊಂಡರು. ಈಗ ಲಿಕ್ಕರ್ ಅಸೋಸಿಯೇಷನ್ ಆರೋಪ ಮಾಡಿದೆ, ಸಿಎಂ ಉತ್ತರ ಕೊಡಬೇಕಲ್ಲಾ?
ಸಿಎಂ ಅವರ ಕೈಯಲ್ಲಿ ನೇರವಾಗಿ ಫೈನಾನ್ಸ್ ಇದೆ. ಒಂದೊಂದು ಲಿಕ್ಕರ್ ಲೈಸೆನ್ಸ್ಗೆ ಎಷ್ಟು ದುಡ್ಡು ಹೋಗಿದೆ ಎಂದು ತನಿಖೆ ಆಗಬೇಕು. ಈಗ ಏನು ಹೇಳುತ್ತಾರೆ ಅವರು? ಪೇ ಸಿಎಂ ಅಂತಿದ್ರು, ಈಗ ಪೇ ಡಬಲ್ ಸಿಎಂ ಹಾಗೂ ಸಚಿವರಿಗೆ ಅನ್ನುತ್ತೇವೆ. ಭ್ರಷ್ಟಾಚಾರದಲ್ಲಿ ಇಡೀ ಸರ್ಕಾರ ಮುಳುಗಿದೆ. ಯಾವ ಇಲಾಖೆಯಲ್ಲಿ ಕೇಳಿದರೂ ಭ್ರಷ್ಟಾಚಾರ ಎಂದು ಹರಿಹಾಯ್ದರು.