ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಸದ್ಯ ಅಂಧ್ರ ರಾಜಕೀಯಲ್ಲಿ ಬ್ಯುಸಿಯಾಗಿದ್ದಾರೆ. ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪವನ್ ಕಲ್ಯಾಣ್ ತಾವು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನೂ ಕಂಪ್ಲೀಟ್ ಮಾಡುತ್ತಿದ್ದಾರೆ. ಈ ಮಧ್ಯೆ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.
ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿಕೊಟ್ಟ ಬಳಿಕ ಸಿನಿಮಾ ರಂಗದಿಂದ ದೂರವಾಗ್ತಾರಾ ಎಂದು ಅಭಿಮಾನಿಗಳು ಚಿಂತೆಗೊಳಗಾಗಿದ್ದಾರೆ. ಆದರೆ ಪವನ್ ಕಲ್ಯಾಣ್ ಪುತ್ರ ಅಕಿರಾ ಚಿತ್ರರಂಗಕ್ಕೆ ಎಂಟ್ರಿಕೊಡುವ ಮೂಲಕ ಆ ನೋವನ್ನು ಮರೆಸುವ ಪ್ರಯುತ್ನ ಮಾಡ್ತಿದ್ದಾರೆ.
ರಾಜಕೀಯಕ್ಕೆ ಬರುವ ಮುನ್ನವೇ ಪವನ್ ಕಲ್ಯಾಣ್ ಅವರು ಓಜಿ, ಉಸ್ತಾದ್ ಭಗತ್ ಸಿಂಗ್, ಹರಿಹರ ವೀರಮಲ್ಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿ OG ಸಿನಿಮಾ ಮೇಲೆ ನಟನಿಗೆ ಭಾರೀ ನಿರೀಕ್ಷೆಯಿದೆ. ಹಾಗಾಗಿ ‘ಓಜಿ’ ಚಿತ್ರದಲ್ಲಿ ಪುತ್ರ ಅಕಿರಾ ನಂದ ಕೂಡ ನಟಿಸಿದ್ದಾರೆ ಎನ್ನಲಾಗಿದೆ. ಪವನ್ ಅವರ ಯೌವ್ವನದ ಪಾತ್ರದಲ್ಲಿ ಅಕಿರಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅಕಿರಾ ಭಾಗದ ಚಿತ್ರೀಕರಣ ಕೂಡ ನಡೆದಿದೆ ಎನ್ನಲಾಗಿದೆ.
OG ಸಿನಿಮಾದಿಂದ ಅಕಿರಾ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಬಳಿಕ ಮುಂದಿನ ದಿನಗಳಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅಕಿರಾ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ.