ಕಳೆದ 10 ವರ್ಷಗಳಿಂದ ಸಕ್ರೀಯ ರಾಜಕೀಯದಲ್ಲಿರುವ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಲಕ್ ಬದಲಾಗಿದೆ. ಪವನ್ ಕಲ್ಯಾಣ್ ಈ ಹಿಂದೆ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಆದರೆ ಜನ ಬೆಂಬಲ ನೀಡದಿದ್ದರೂ ರಾಜಕೀಯದಿಂದ ಹಿಂದೆ ಸರಿಯಲಿಲ್ಲ. ತಾಳ್ಮೆಯಿಂದ ತಮ್ಮ ಕೆಲಸ ಮುಂದುವರಿಸಿದ ಪವನ್, ಧೈರ್ಯದಿಂದ ಹೋರಾಡಿದರು. ಕೊನೆಗೂ ಪವರ್ ಸ್ಟಾರ್ ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಭಾರೀ ಬಹುಮತದೊಂದಿಗೆ ಗೆದ್ದು ಅಸೆಂಬ್ಲಿ ಪ್ರವೇಶಿಸಿದ್ದರು.
ಗುರುವಾರ ಈ ಕೆಲಸಗಳನ್ನು ಮಾಡಿದರೆ ನಿಮಗೆ ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತೆ.!
ಇದೀಗ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಅಧಿಕೃತವಾಗಿ ‘ಮಾನ್ಯತೆ ಪಡೆದ ರಾಜಕೀಯ ಪಕ್ಷ’ ಎಂಬ ಸ್ಥಾನಮಾನವನ್ನು ನೀಡಿದೆ. ಈ ಕುರಿತು ಪಕ್ಷವು ಬುಧವಾರ ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಈ ಘೋಷಣೆ ಮಾಡಿದೆ. ಚುನಾವಣಾ ಆಯೋಗವು ಕಾಯ್ದಿರಿಸಿದಂತೆ ಪಕ್ಷವು ಈಗ ಪಕ್ಷದ ಶಾಶ್ವತ ಅಧಿಕೃತ ಚುನಾವಣಾ ಚಿಹ್ನೆಯಾಗಿ “ಗಾಜಿನ ಲೋಟ” ವನ್ನು ಹೊಂದಿದೆ.
ಈ ಮಾನ್ಯತೆಯ ಬಗ್ಗೆ ಮಂಗಳವಾರ ಪತ್ರದ ಮೂಲಕ ಸಂವಹನ ನಡೆಸಲಾಗಿದೆ ಎಂದು ಜನಸೇನಾ ಪಕ್ಷ ಬಹಿರಂಗಪಡಿಸಿದೆ. ಜನಸೇನಾ ಮಾನ್ಯತೆ ಪಡೆದ ಪ್ರಾದೇಶಿಕ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಚುನಾವಣೆಯಲ್ಲಿ ಸಾಧಿಸಿದ ಐತಿಹಾಸಿಕ ವಿಜಯದೊಂದಿಗೆ ಇತಿಹಾಸ ಸೃಷ್ಟಿಸಿದ ಜನಸೇನಾ ಪಕ್ಷದ ಶಾಶ್ವತ ಚಿಹ್ನೆಯಾಗಿ ಗಾಜಿನ ಚಿಹ್ನೆಯನ್ನು ಗುರುತಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಒಂದು ದಶಕಕ್ಕೂ ಹೆಚ್ಚು ಕಾಲ ಪವನ್ ಕಲ್ಯಾಣ್ ಅವರ ಹೋರಾಟವು ಜನಸೇನಾ ಪಕ್ಷವನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷವೆಂದು ಅಂಗೀಕರಿಸುವಲ್ಲಿ ಕೊನೆಗೊಂಡಿತು” ಎಂದು ಅದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ದ್ಯ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯೂ ಆಗಿದ್ದಾರೆ.