ಹೈದರಾಬಾದ್: ತಿರುಪತಿ ತಿರುಮಲ ದೇವಸ್ಥಾನ ಲಡ್ಡು ವಿವಾದ ಹಿನ್ನೆಲೆ ಆಂಧ್ರ ಪ್ರದೇಶದ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ ಕೈಗೊಂಡಿದ್ದ 11 ದಿನಗಳ ಪ್ರಾಯಶ್ಚಿತ ಪೂಜೆ ಯಶಸ್ವಿಯಾಗಿದೆ. ಪೂಜೆಯ ಕೊನೆ ದಿನ ನಟ ತಮ್ಮ ಮಗಳೊಟ್ಟಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಳೆದ ತಿಂಗಳು ದೇಶದ ಕೋಟ್ಯಾಂತರ ಜನರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನ ಪ್ರಸಾದವು ವಿವಾದಕ್ಕೆ ಕಾರಣವಾಗಿತ್ತು. ತಿರುಪತಿ ಲಡ್ಡುವಿಗೆ ಬಳಸುವ ತುಪ್ಪದಲ್ಲಿ ಪ್ರಾಣಿ ಕೊಬ್ಬು ಮಿಶ್ರಣವಿದೆ ಎಂಬ ಲ್ಯಾಬ್ ವರದಿಯು ದೊಡ್ಡ ಸದ್ದು ಮಾಡಿತ್ತು.
Navratri 2024: ನವರಾತ್ರಿಯ 9 ದಿನಗಳು ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಇಲ್ಲಿದೆ ನೋಡಿ!
ಹಿಂದಿನ ಸರ್ಕಾರದ ಅಕ್ರಮ ಎಂದು ರಾಜಕೀಯ ಸಂಘರ್ಷಗಳು ನಡೆದಿದ್ದವು. ಈ ಬಗ್ಗೆ ತನಿಖೆಗೆ ಅಲ್ಲಿನ ಸರ್ಕಾರವು ಮುಂದಾಗಿತ್ತು. ಇನ್ನು ವಿವಾದದಿಂದ ನೊಂದ ದೇವಸ್ಥಾನ, ಭಕ್ತರು ಪರವಾಗಿ ಆಂಧ್ರ ಪ್ರದೇಶ ನೂತನ ಡಿಸಿಎಂ ಪವನ್ ಕಲ್ಯಾಣ್ ಅವರು ವಿಶೇಷ ಪೂಜೆ ಕೈಗೊಂಡಿದ್ದರು. ದೀಕ್ಷೆಯ ಕೊನೆಯ ದಿನವಾದ ಬುಧವಾರ ಮಧ್ಯಾಹ್ನ ಕೇಸರಿ ಬಟ್ಟೆಯನ್ನು ಧರಿಸಿ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ನಟ ಪವನ್ ಕಲ್ಯಾಣ ಬಂದರು. ದೇವರ ದರ್ಶನದ ನಂತರ ರಂಗನಾಯಕುಲ ಮಂಟಪದಲ್ಲಿ ಟಿಟಿಡಿ ಅಧಿಕಾರಿಗಳಿಂದ ಶ್ರೀವಾರಿ ತೀರ್ಥ ಪ್ರಸಾದ ಮತ್ತು ಸ್ಮರಣಿಕೆ ಸ್ವೀಕರಿಸಿದರು.