ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಪವಿತ್ರಾ ಗೌಡ, ಎ2 ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಪೊಲೀಸರಿಗೆ ಬಲವಾದ ಸಾಕ್ಷಿ ಸಿಕ್ಕಿದೆ.
ತನಿಖೆ ನಡೆಸುತ್ತಿರುವ ಪೊಲೀಸರು ಅನೇಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕೊಲೆ ನಡೆದ ಬಳಿಕ ರೇಣುಕಾ ಸ್ವಾಮಿ ಮೊಬೈಲ್ ಅನ್ನು ಡಿ ಗ್ಯಾಂಗ್ನವರು ಮೋರಿಯಲ್ಲಿ ಎಸೆದಿದ್ದರು. ಆ ಮೊಬೈಲ್ಗಾಗಿ ಪೊಲೀಸರು ಸಿಕ್ಕಾಪಟ್ಟೆ ಹುಡುಕಾಟ ನಡೆಸಿದ್ದರು. ಕಡೆಗೂ ಪೊಲೀಸರಿಗೆ ಆ ಮೊಬೈಲ್ನಲ್ಲಿದ್ದ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
ಲಾಹೋಟಿ ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಶ್ರೀನಿವಾಸ ಸರಡಗಿಯಲ್ಲಿ ಒಂದು ದಿನದ ಕಾರ್ಯ ಶಿಬಿರ!
ರೇಣುಕಾ ಸ್ವಾಮಿಯ ಮೊಬೈಲ್ ರಿಟ್ರೀವ್ನಿಂದಾಗಿ ದರ್ಶನ್ಗೆ ಕಂಟಕ ಎದುರಾಗಿದೆ. ರೇಣುಕಾ ಸ್ವಾಮಿ ಬಳಸಿದ್ದ ನಂಬರ್ನಲ್ಲೇ ಹೊಸ ಸಿಮ್ ಪಡೆದುಕೊಂಡು ಡೇಟಾ ರಿಟ್ರೀವ್ ಮಾಡಲಾಯಿತು. ಆತ ಬಳಕೆ ಮಾಡಿದ್ದ ವಾಟ್ಸಪ್ ,ಇನ್ಸ್ಟಾಗ್ರಾಂ, ಫೇಸ್ ಬುಕ್ ಮುಂತಾದ ಆ್ಯಪ್ಗಳ ಮಾಹಿತಿ ಈಗ ಪೊಲೀಸರ ಕೈ ಸೇರಿದೆ. ಯಾರಿಗೆಲ್ಲ ಆತ ಸಂದೇಶ ಕಳಿಸಿದ್ದ? ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಕಳಿಸಿದ ಮೆಸೇಜ್ ಏನು? ಅದಕ್ಕೆ ಪವಿತ್ರಾ ನೀಡಿದ್ದ ರಿಪ್ಲೇ ಏನು ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಮೇಜರ್ ಸಾಕ್ಷಿ ಆಗಲಿದೆ. ಜೊತೆಗೆ, ವಾಹನದಲ್ಲಿ ಮೃತದೇಹ ಸಾಗಾಟ ಮಾಡಿದ್ದವರ ಫಿಂಗರ್ ಪ್ರಿಂಟ್ ಹೊಂದಿಕೆ ಆಗಿದೆ. ಕೊಲೆಯಾದ ಮೂರು ದಿನಗಳ ಸಿಸಿಟಿವಿ ದೃಶ್ಯಗಳನ್ನು ಕೂಡ ರಿಟ್ರೀವ್ ಮಾಡಲಾಗಿದೆ. ದರ್ಶನ್ ಮನೆಗೆ ಸಿಸಿಟಿವಿಯಲ್ಲಿ ಜೂನ್ 8, 9 ಹಾಗೂ 10ರಂದು ಸೆರೆಯಾದ ದೃಶ್ಯಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಸಾಕ್ಷಿ ನಾಶದ ಉದ್ದೇಶದಿಂದ ಡಿಲೀಟ್ ಆಗಿದ್ದ ದೃಶ್ಯಗಳೆಲ್ಲ ಪೊಲೀಸರಿಗೆ ಸಿಕ್ಕಿವೆ.