ಬೆಂಗಳೂರು: ದರ್ಶನ್ ತೂಗುದೀಪ್ ಅವರ ಗೆಳತಿ ಪವಿತ್ರಾ ಗೌಡ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ನುಂಗುತ್ತಿದ್ದಾರೆ.ಆದರೆ ಈ ಎಲ್ಲಾ ಆರೋಪಗಳ ನಡುವೆ ಇದೀಗ ಪವಿತ್ರಾ ಗೌಡ ಮತ್ತೊಮ್ಮೆ ಪ್ರೆಗ್ನೆಂಟ್ ಅಂದ್ರೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ!
ಪವಿತ್ರಾ ಗೌಡ ಆರೋಗ್ಯ ಹದಗೆಡುತ್ತಿದ್ದಂತೆ ಜೈಲಿಗೆ ಕುಟುಂಬಸ್ಥರ ಆಗಮನವಾಗಿದ್ದು ತಾಯಿ ಶೋಭ, ತಂದೆ ಪುಟ್ಟಣ್ಣ ಮತ್ತು ಕುಟುಂಬಸ್ಥರು ಪವಿತ್ರಾ ಗೌಡ ಭೇಟಿಗೆ ಬಂದಿದ್ದಾರೆ.
ಜೈಲಿನಲ್ಲಿರುವ ಪವಿತ್ರಾ ಗೌಡ ಆರೋಗ್ಯದಲ್ಲೂ ವ್ಯತ್ಯಯ, ಜೈಲು ವೈದ್ಯರಿಂದ ಚಿಕಿತ್ಸೆ
ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಪವಿತ್ರಾ ಲೋ ಬಿಪಿ, ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆಯಿಂದ ಪವಿತ್ರಾ ಕಂಗಾಲು ತೀವ್ರ ಸುಸ್ತು ಬಳಲಿಕೆಯಿಂದ ಚಿಕಿತ್ಸೆ ಪಡೆದಿರುವ ಪವಿತ್ರ ಗೌಡಜೈಲಿನ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಪಡೆದು ಕೊಂಚ ಚೇತರಿಕೆ ಪವಿತ್ರಾ ಗೌಡ ಆರೋಗ್ಯ ವಿಚಾರಿಸಲು ಆಗಮಿಸಿದ ಕುಟುಂಬಸ್ಥರು ಬ್ಯಾಗ್ ನಲ್ಲಿ ಬಟ್ಟೆ ಮತ್ತು ಹಣ್ಣುಗಳನ್ನು ತೆಗೆದುಕೊಂಡು ಹೋದ ಪವಿತ್ರಾ ಗೌಡ ಚಿಕ್ಕಮ್ಮನ ಮಗ.
ಹೌದು, ಇದೀಗ ಪವಿತ್ರಾ ಗೌಡ ಅವರು ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಸೋಷಿಯಲ್ ಮೀಡಿಯಾ ವೇದಿಕೆಯಿಂದ ಹಿಡಿದು ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕೂಡ ಭಾರಿ ದೊಡ್ಡ ಚರ್ಚೆ ಶುರು ಆಗುವಂತೆ ಮಾಡಿದೆ. ಅಷ್ಟಕ್ಕೂ ಪವಿತ್ರಾ ಗೌಡ ಅವರಿಗೆ ಈಗಾಗಲೇ ಒಬ್ಬ ಮಗಳು ಇದ್ದು, ಮೊದಲ ಗಂಡನಿಂದ ಪವಿತ್ರಾ ಗೌಡ ಒಂದು ಮಗುವನ್ನ ಪಡೆದಿದ್ದಾರೆ. ಆದರೆ ಇದೀಗ ಪವಿತ್ರಾ ಗೌಡ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ಪವಿತ್ರಾ ಗೌಡ ಇದೀಗ 2ನೇ ಮಗು ನಿರೀಕ್ಷೆಯಲ್ಲಿ ಇದ್ದಾರೆ ಎಂಬ ಗಾಳಿ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಟ್ರೋಲ್ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.