ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಆಗಿ ಜೂನ್ 20ರಂದು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಪವಿತ್ರಾ ಗೌಡ 6 ತಿಂಗಳ ಬಳಿಕ ಮತ್ತೆ ಮನೆಗೆ ಮರಳಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಜೈಲಿನಿಂದ ಪವಿತ್ರಾ ಗೌಡ ರಿಲೀಸ್ ಆಗಿದ್ದಾರೆ. ಪವಿತ್ರಾ ಗೌಡ ಅವರು ನೇರ ತಲಘಟ್ಟಪುರದ ಮುನೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ. ಬಳಿಕ ದೇವಾಲಯದಲ್ಲಿ ಪವಿತ್ರಾ ತೀರ್ಥಸ್ನಾನ ಮಾಡಿದ್ದಾರೆ.
ಕನಕಪುರ ರಸ್ತೆಯ ತಲಘಟ್ಟಪುರದ ಮುನೇಶ್ವರ ದೇವಾಲಯ ಪವಿತ್ರಾಗೌಡ ಅವರ ತಾಯಿಯ ಮನೆ ದೇವರು ಆಗಿದೆ. ಹೀಗಾಗಿ ಜೈಲಿನಿಂದ ಪವಿತ್ರಾಗೌಡ ಬಿಡುಗಡೆ ಆದ ಮೇಲೆ ಅವರ ತಾಯಿ ಮೊದಲು ಜೈಲಿನ ಆವರಣದಲ್ಲಿರುವ ಮುನೇಶ್ವರನಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಇದಾದ ಮೇಲೆ ನೇರ ತಲಘಟ್ಟಪುರದ ಮುನೇಶ್ವರ ದೇವಾಲಯ ಭೇಟಿ ಕೊಟ್ಟಿದ್ದರು.
Drumstick Tea Health Benefits: ನುಗ್ಗೆಸೊಪ್ಪಿನ ಚಹಾ ಕುಡಿಯೋದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ಈ ವೇಳೆ ದೇವಾಲಯದ ಮುಂದೆ ಪವಿತ್ರಾಗೌಡ ತೀರ್ಥಸ್ನಾನ ಮಾಡಿದ್ದಾರೆ. ದೇವರಿಗೆ ಹೂವು, ಕಾಯಿ, ಆಗರಬತ್ತಿ, ನಿಂಬೆಹಣ್ಣು ಸಮೇತ ವಿಶೇಷ ಪೂಜೆ ಮಾಡಿದ್ದಾರೆ. ವಜ್ರಮುನೇಶ್ವರ ದೇವಾಲಯದಲ್ಲಿ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ. ಈ ವೇಳೆ ಕೊನೆಯಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಪೂಜಾರಿಗಳಿಗೆ ಹೇಳಲಾಗಿದೆ. ಹೀಗಾಗಿ ಪೂಜಾರಿ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿದ್ದಾರೆ. ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇದೀಗ ಆರ್ಆರ್ ನಗರದ ನಿವಾಸದತ್ತ ಪವಿತ್ರಾ ಕುಟುಂಬ ತೆರಳಿದ್ದಾರೆ.