ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆಳತಿ ಹಾಗೂ ನಟಿ ಪವಿತ್ರಾ ಗೌಡ 6 ತಿಂಗಳ ಬಳಿಕ ಪರಪ್ಪನ ಅಗ್ರಹಾರದಿಂದ ಹೊರಗೆ ಬಂದ್ರು. ಹೊರಗೆ ಐಷಾರಾಮಿ ಜೀವನ ನೋಡಿದ್ದ ಪವಿತ್ರಾಗೆ ಸೆಂಟ್ರಲ್ ಜೈಲು ನರಕ ದರ್ಶನ ಮಾಡಿಸಿತ್ತು. ಬೇಲ್ ಸಿಗ್ತಿದ್ದಂತೆ ಜೈಲಿನಲ್ಲೇ ಕಣ್ಣೀರಿಟ್ಟಿದ್ದ ಪವಿತ್ರಾ ಗೌಡ, ಹೊರಗೆ ಬರ್ತಿದ್ದಂತೆ ನಗು ನಗುತ್ತಾ ಅಮ್ಮನ ಮನೆ ಸೇರಿಕೊಂಡ್ರು. ಇದೀಗ ಕಳೆದ 8 ತಿಂಗಳಿಂದ ಮುಚ್ಚಿದ್ದ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀಲಾಂಚ್ ಮಾಡಿದ್ದಾರೆ.
ನಟ ದರ್ಶನ್ ಗೆಳತಿ ಪವಿತ್ರಾ ಗೌಡ, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಬಳಿಕ ವ್ಯವಹಾರಗಳತ್ತ ಗಮನ ಹರಿಸಿದ್ದಾರೆ. ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ ಪ್ರಾರಂಭಿಸಿದ್ದರು. ಕಳೆದ ಎಂಟು ತಿಂಗಳಿಂದ ಮುಚ್ಚಿದ್ದ ಸ್ಟುಡಿಯೋಗೆ ಇಂದು ಮರುಚಾಲನೆ ನೀಡಲಾಗಿದೆ.
ನಿಮಗೆ ಗೊತ್ತೆ..? ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ ಪಕ್ಕಾ ಹೆಲ್ಪ್ ಮಾಡುತ್ತೆ..!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಜೈಲು ಸೇರಿದ್ದರು. ಜೈಲಿಗೆ ಹೋದ ಬಳಿಕ ಸ್ಟುಡಿಯೋ ಕ್ಲೋಸ್ ಆಗಿತ್ತು. ಪ್ರೇಮಿಗಳ ದಿನದ ಪ್ರಯುಕ್ತ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಮಾಡಿದ್ದಾರೆ. ಸ್ಟುಡಿಯೋಗೆ ಪವಿತ್ರಾ ಗೌಡ ರೇಂಜ್ ರೋವರ್ ಕಾರ್ನಲ್ಲಿ ಬಂದು ಗಮನ ಸೆಳೆದರು. ಪವಿತ್ರಾ ಗೌಡ, ಸ್ಟುಡಿಯೋದಲ್ಲಿ ಗಣಹೋಮ, ಕಾರ್ಯಸಿದ್ಧಿ ಹೋಮ ಮಾಡಿಸಿದ್ದಾರೆ. ಈ ರೀಲಾಂಚ್ ಕಾರ್ಯಕ್ರಮಕ್ಕೆ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ.