ದಾವಣಗೆರೆ:- ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಪ್ರಕರಣದ ಆರೋಪಿ ಪಾದ್ರಿ ರಾಜಶೇಖರ್ನನ್ನು ಖಚಿತ ಮಾಹಿತಿ, ಮೊಬೈಲ್ ಲೊಕೇಷನ್ ಆಧರಿಸಿ ಹೈದರಾಬಾದ್ನಲ್ಲಿ ಕೆಟಿಜೆ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರ್ಆರ್ ಪಂದ್ಯಕ್ಕೆ ಆರ್ಸಿಬಿಗೆ 6 ಬದಲಾವಣೆ ಅಗತ್ಯ! – ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟಿಂಗ್!
ಈ ಹಿಂದೆ ಪುತ್ರಿಯೇ ಪಾದ್ರಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಅನ್ಯ ಸ್ತ್ರೀಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆಂದು ಆರೋಪಿಸಿದ್ದರು. ಜಯನಗರ ಚರ್ಚ್ನ 58 ವಯಸ್ಸಿನ ಪಾದ್ರಿ ಪಿ ರಾಜಶೇಖರ್ ಮಗಳ ಆರೋಪಕ್ಕೆ ತಂದೆ ಗುರಿಯಾಗಿದ್ದ. ಇದಷ್ಟೆ ಅಲ್ಲಾ ಚರ್ಚ್ಗೆ ಬರುವ ಆರೇಳು ಜನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಸಹ ಮಾಡಿದ್ದಾರೆ ಎಂದು ಮಗಳ ಆರೋಪಿಸಿದ್ದರು.
ನನ್ನ ತಂದೆ ಈಗ ನನಗಿಂತ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆ ಯಾಗಲು ಮುಂದಾಗುತ್ತಿದ್ದಾರೆ. ನನಗೆ 33 ವರ್ಷ, ಮದುವೆಯಾಗುವ ಹುಡುಗಿಗೆ 30 ವರ್ಷ, ಹಾಗಾಗಿ ನನ್ನ ವಿರೋಧವಿದೆ. ಪಾದ್ರಿ ಹಲವಾರು ವರ್ಷಗಳಿಂದ ಈ ಕೃತ್ಯ ಮಾಡಿಕೊಂಡು ಬಂದಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಪಾಸ್ಟರ್ ಆಸೋಷಿಯೇಷನ್ನಿಂದ ರಾಜಶೇಖರ್ ನಡೆಗೆ ಖಂಡನೆ ವ್ಯಕ್ತವಾಗಿತ್ತು.
![](https://ainlivenews.com/wp-content/uploads/2024/01/Ad-Banner-copy-scaled.jpg)