ಬೆಂಗಳೂರು: ಜೆಟ್ಲಾಗ್ ನಲ್ಲಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಪ್ರಕರಣ ಹಿನ್ನೆಲೆ ತನಿಖಾ ವರದಿ ತಯಾರು ಮಾಡಿರೋ ಸುಬ್ರಮಣ್ಯನಗರ ಪೊಲೀಸರು ರಿಪೋರ್ಟ್ ನೀಡೋಕೆ ಮಲ್ಲೇಶ್ವರಂ ಎಸಿಪಿಗೆ ಸೂಚಿಸಿದ್ದ ಕಮೀಷನರ್ ದಯಾನಂದ್
ಸ್ಟಾರ್ ಗಳ ಹೇಳಿಕೆ ಹಾಗೂ ಸಿಬ್ಬಂದಿ ತನಿಖಾ ವರದಿ ಕೇಳಿದ್ದ ಕಮೀಷನರ್ ನಾಳೆ (ಮಂಗಳವಾರ) ತನಿಖಾ ವರದಿ ಸಲ್ಲಿಕೆಗೆ ಸಿದ್ಧತೆ ಮಾದಕ ವಸ್ತು ಬಳಕೆ ಬಗ್ಗೆ ಸ್ಟಾರ್ ಗಳಿಗೆ ಪ್ರಶ್ನೆ ಮಾಡಿದ್ದ ಪೊಲೀಸರು..!
ತಡರಾತ್ರಿ ವರೆಗೂ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಾಹಿತಿ ಕೇಳಿರೊ ಖಾಕಿ ಪಾರ್ಟಿಯಲ್ಲಿ ಮಾದಕ ವಸ್ತು ಬಳಸಿರಬಹುದು ಎಂಬ ಶಂಕೆ
ಹೀಗಾಗಿ ಗಾಂಜಾ ಸೇವನೆ ಬಗ್ಗೆ ಸ್ಟಾರ್ ನಟರನ್ನ ಪ್ರಶ್ನೆ ಮಾಡಿದ್ದ ಪೊಲೀಸರು ಗಾಂಜಾ ಪ್ರಶ್ನೆಗೆ ದರ್ಶನ್ ಗರಂ ಆಗಿದ್ರಂತೆ!ಗಾಂಜಾ ಬಗ್ಗೆ ಯಾಕೆ ಕೇಳ್ತಿದ್ದೀರಾ..? ಯಾವುದಾದ್ರೂ ಮಾಧ್ಯಮದಲ್ಲಿ ಬಂದಿದ್ಯಾ ಅಂತಾ ಗರಂ ಆಗಿದ್ದ ದರ್ಶನ್ ಅಲ್ಲಿ ಯಾವುದೇ ರೀತಿ ಮಾದಕ ವಸ್ತು ಸೇವನೆ ಆಗಿಲ್ಲ ಅಂತ ಉತ್ತರ ನೀಡಿದ್ದ ದರ್ಶನ್. ಊಟ, ಸಿನಿಮಾ ವಿಚಾರದ ಮಾತುಕತೆ ಎಂದಿರೋ ಸ್ಟಾರ್ಸ್ ಯಾವ ಕಾರಣಕ್ಕೆ ಅಷ್ಟೊತ್ತು ಪಬ್ ನಲ್ಲಿದ್ದೀರಾ ಅಂತಾ ಕೇಳಿದ್ದ ಪೊಲೀಸರು.
ಈ ವೇಳೆ ಊಟ ಮಾಡಿ ಕೆಲ ಹೊತ್ತು ಸಿನಿಮಾದ ಮಾತು ಕತೆ ಹಿನ್ನೆಲೆ ಲೇಟಾಗಿದೆ ಅಂತ ಉತ್ತರ ಎಲ್ಲರನ್ನೂ ನಾನೇ ಕರೆದಿದ್ದು ಎಂದಿರೋ ರಾಕ್ಲೈನ್ ಎಲ್ಲರನ್ನೂ ನಾನೇ ಸೇರಿಸಿದ್ದೆ.. ಊಟ ಮಾಡಿ ಮಾತು ಕತೆ ಆಗಿದ್ದರಿಂದ ಲೇಟಾಯ್ತು ಕೆಳಗಡೆ ದರ್ಶನ್ ಬರೋವಾಗ ಜನ ಸೇರಿದ್ರು ಹೀಗಾಗಿ ಒಂದಷ್ಟು ತೊಂದರೆಯಾಯ್ತು ಎಂದಿರೋ ರಾಕ್ಲೈನ್ ಆದ್ರೆ ಯಾವುದೇ ಕಾನೂನು ನಿಯಮ ಉಲ್ಲಂಘಿಸಿಲ್ಲ ಅಂತಾ ಉತ್ತರ
ಸದ್ಯ ಎಲ್ಲಾ ಸ್ಟಾರ್ ಗಳ ಹೇಳಿಕೆ ದಾಖಲಿಸಿಕೊಂಡಿರೋ ಪೊಲೀಸರು ಸದ್ಯ ಕೇಸ್ ನ ಸಂಪೂರ್ಣ ರಿಪೋರ್ಟ್ ತಯಾರಿಸಿರೋ ಸುಬ್ರಮಣ್ಯ ನಗರ ಪೊಲೀಸರು.. ಇಲ್ಲಿಯವರೆಗೂ ತನಿಖೆ ಆಗಿರೋ ರಿಪೋರ್ಟ್ ತಯಾರಿ ಮಂಗಳವಾರ ಕಮಿಷನರ್ ದಯಾನಂದ್ ಗೆ ತನಿಖಾ ವರದಿ ಸಲ್ಲಿಕೆ ಸಾಧ್ಯತೆ