ನವದೆಹಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತಾ ಉಲ್ಲಂಘನೆಯ ಮಾಸ್ಟರ್ಮೈಂಡ್ ಲಲಿತ್ ಝಾನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋಲ್ಕತ್ತಾ ಮೂಲದ ಶಿಕ್ಷಕ ಎರಡು ದಿನಗಳ ಕಾಲ ಪರಾರಿಯಾಗಿದ್ದ. ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಜಿಗಿದ ಇಬ್ಬರು ಯುವಕರು ಹಳದಿ ಬಣ್ಣದ ಹೊಗೆ ಸಿಂಪಡಿಸಿದ್ದರು. ಭದ್ರತಾ ಉಲ್ಲಂಘನೆಗಾಗಿ ಐವರನ್ನು ಬುಧವಾರ ಬಂಧಿಸಲಾಗಿತ್ತು.
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ
ಸಾಗರ್, ಮನೋರಂಜನ್, ಅಮೋಲ್ ಮತ್ತು ನೀಲಂ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿತ್ತು. ಅವರ ಜೊತೆ ಕೈಜೋಡಿಸಿದ್ದ ಮತ್ತೊಬ್ಬ ಆರೋಪಿ ವಿಶಾಲ್ನನ್ನು ಬಳಿಕ ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿಗಳು ಸಂಸತ್ತಿಗೆ ಬರುವ ಮೊದಲು ವಿಶಾಲ್ ಅವರ ಗುರುಗ್ರಾಮದ ಮನೆಯಲ್ಲೇ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಲಲಿತ್ ಝಾ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈಗ ಪ್ರಕರಣದ ಮಾಸ್ಟರ್ಮೈಂಡ್ನನ್ನು ಬಂಧಿಸಿದ್ದಾರೆ. ಲಲಿತ್ ಝಾ ತಾನಾಗಿಯೇ ಠಾಣೆಗೆ ಬಂದು ಸರೆಂಡರ್ ಆಗಿದ್ದಾನೆ ಎನ್ನಲಾಗಿದೆ.