ಬೆಂಗಳೂರು:- ಸಂಸತ್ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೋರಂಜನ್ ಯಾರು? ಆತನ ಹಿನ್ನೆಲೆ ಏನು ಎಂಬುವ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.
ಸಂಸತ್ ದಾಳಿ ಬಳಿಕ ಮೈಸೂರಿನ ಮನೋರಂಜನ್ ಹಿನ್ನೆಲೆ ಹುಡುಕಾಟ ಶುರುಮಾಡಿದ ಪೊಲೀಸರು. ಮನೋರಂಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ. ಇನ್ನು ಅವನ ಸೋಷಿಯಲ್ ಮೀಡಿಯಾ ಅಕೌಂಟ್ ಬಗ್ಗೆಯು ಹುಡುಕಾಟ ನಡೆಸಿದ್ದಾರೆ. ಸದ್ಯ ಆತನ ಸೋಷಿಯಲ್ ಮೀಡಿಯಾ ಅಕೌಂಟ್ ಕೂಡ ಈವರೆಗು ಪತ್ತೆಯಾಗಿಲ್ಲ. ಬೇರೆ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಅಕೌಂಟ್ ಇದೆಯಾ ಎಂಬ ಬಗ್ಗೆಯು ಹುಡುಕಾಟ ನಡೆಸಿರುವ ತನಿಖಾಧಿಕಾರಿಗಳು.ಸದ್ಯ ಮೈಸೂರು ಪೊಲೀಸರಿಗೆ ಈತನ ಪೂರ್ವಪರ ವಿಚಾರಿಸಿ ಯಾವುದೇ ದೆಹಲಿ ಪೊಲೀಸರಾಗಲಿ ಯಾರೂ ಕೂಡ ಸಂಪರ್ಕಮಾಡಿಲ್ಲ. ಆದರೂ ಆತನ ಹಿನ್ನೆಲೆ ಬಗ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕ್ರಾಂತಿಕಾರಿ ವಿಚಾರಗಳನ್ನು, ಪುಸ್ತಕಗಳನ್ನು ಓದುತ್ತಿದ್ದರೂ ಒಂದೇ ಒಂದು ಹೋರಾಟದಲ್ಲೂ ಭಾಗಿಯಾಗದ ಮನೋರಂಜನ್ ಹೋರಾಟದಲ್ಲಿ ಭಾಗಿಯಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆತನ ವಿರುದ್ಧ ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಎಸ್ಎಫ್ಐ ಜೊತೆಗೆ ಗುರುತಿಸಿಕೊಂಡಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ.
ಯಾವ ಸಂಘಟನೆಗಳ ಜೊತೆಯು ಅಧಿಕೃತವಾಗಿ ಗುರುತಿಸಿಕೊಂಡಿರದ ಮನೋರಂಜನ್. ಹಾಗಾದ್ರೆ ಮನೋರಂಜನ್ ದಾರಿ ತಪ್ಪಿದ್ದು ಎಲ್ಲಿ? ಕೀಳು ಪ್ರಚಾರದ ಆಸೆಗೆ ಹೇಯ ಕೃತ್ಯ ಎಸಗಿದನ ಮನೋರಂಜನ್?
ಮನೋರಂಜನ್ ಮುತ್ತಾತ ಪಟೇಲ್ ಈರೇಗೌಡ, ತಾತ ರುದ್ರಪ್ಪಗೌಡ, ತಂದೆ ದೇವರಾಜೇಗೌಡ ಪಿರ್ತಾರ್ಜಿತ ಬೇಕಾದಷ್ಟಿದೆ. ತಂದೆ ಮಾಡಿದ ತೋಟವಿದೆ. ಆದರೆ ಅದೆಲ್ಲವನ್ನೂ ಬಿಟ್ಟು ಸಮಾಜ ಸುಧಾರಣೆಯ ಜಪ ಮಾಡುತ್ತಿದ್ದ ಮನೋರಂಜನ್. ಯಾವಾಗಲೂ ಪುಸ್ತಕ ಓದುವುದು ಸಮಾಜ ಸುಧಾರಣೆ ಮಾತಾಡುವುದು ಇದರಲ್ಲೇ ಮುಳುಗಿಹೋಗಿದ್ದ. ತಂದೆ ಮೂಲತಃ ಹಾಸನ ಜಿಲ್ಲೆ ಅರಕಲಗೂಡು ಮಲ್ಲಾಪುರ ಗ್ರಾಮದವರು.
ಮಗನ ಓದಿಗಾಗಿಯೇ ಮೈಸೂರಿಗೆ ಬಂದಿದ್ದ ಕುಟುಂಬ. 15 ವರ್ಷಗಳಿಂದ ಮೈಸೂರಲ್ಲೇ ದೇವರಾಜೇಗೌಡ ವಾಸ ಮಾಡಲು ಶುರು ಮಾಡಿದರು. ಮೈಸೂರಿನ ಪ್ರತಿಷ್ಠಿತ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಶಿಕ್ಷಣ, ಸಂತ ಜೋಸೆಫ್ ಕಾಲೇಜಿನಲ್ಲಿ ಪ್ರೌಢ ವಿದ್ಯಾಭ್ಯಾಸ, ಬೆಂಗಳೂರಿನ ಬಿಇಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್. ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯರಿಂಗ್ ಮಾಡಿರುವ ಮನೋರಂಜನ್. 2013-14ರಲ್ಲೇ ವಿದ್ಯಾಭ್ಯಾಸ ಮುಕ್ತಾಯಗೊಳಿಸಿದ್ದಾನೆ.
ಕಿಕ್ ಬಾಕ್ಸಿಂಗ್ ಸಹ ಮಾಡುವ ಮನೋರಂಜನ್. ಎಂಜಿನಿಯರಿಂಗ್ ಮುಗಿಸಿದ್ರೂ ನಿರುದ್ಯೋಗಿ ಆಗಿದ್ದ. ಕೆಲಸಕ್ಕೂ ಹೋಗದೆ, ಮದುವೆಯನ್ನೂ ಆಗದೆ ಒಬ್ಬಂಟಿಯಾಗಿದ್ದ. ಮನೆ ಸುತ್ತ -ಮುತ್ತಲಿನವರ ಯಾರೊಂದಿಗೂ ಬೆರೆಯದೇ ಅಪರಿಚಿತನಂತಿರುತ್ತಿದ್ದ. ಕೊಠಡಿ ಒಳಗೆ ಸೇರಿಕೊಂಡು ಪುಸ್ತಕ ಓದುತ್ತಿದ್ದ. ಆಗಾಗ ಬೆಂಗಳೂರು, ದೆಹಲಿಯಲ್ಲದೆ ವಿದೇಶಕ್ಕೂ ತೆರಳುತ್ತಿದ್ದ. ಪದೇ ಪದೇ ಬೆಂಗಳೂರಿಗೆ ಅಂತ ಹೇಳಿ ಹೋಗುತ್ತಿದ್ದ.
ಮನೆಗೆ ಬರುತ್ತಿದ್ದ ಪೋಸ್ಟ್ ಗಳನ್ನ ಬೇರೆ ವಿಳಾಸಕ್ಕೆ ವರ್ಗಾಯಿಸಿದ್ದ. ಬೆಂಗಳೂರಿನಲ್ಲಿ ತಾನು ಉಳಿದುಕೊಂಡಿದ್ದ ಕೊಠಡಿಗೆ ಬರುವಂತೆ ನೋಡಿಕೊಂಡಿದ್ದ ಮನೋರಂಜನ್ ವಿಳಾಸಗಳು ಬಳಸಿರೋದ್ರಲ್ಲೇ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಹಿಂದೆಯೂ ಹಳೇ ಸಂಸತ್ ಭವನಕ್ಕೆ ಹೋಗಿದ್ದ ಮನೋರಂಜನ್ ಆ ವೇಳೆಯೂ ಸಂಸದ ಪ್ರತಾಪ ಸಿಂಹ ಅವರಿಂದ ಪಾಸ್ ಪಡೆದಿದ್ದ. ವಿಚಿತ್ರವೆಂದರೆ ಒಮ್ಮೆಯೂ ಪ್ರತಾಪ್ ಸಿಂಹರನ್ನು ಭೇಟಿ ಮಾಡಿಲ್ಲವೆಂಬುದು. ಕಳೆದ ಬಾರಿ ಪಾಸ್ ಪಡೆದು ಸಂಸತ್ ಭವನಕ್ಕೆ ಹೋಗಿದ್ದಾಗ ಏಕಾಂಗಿಯಾಗಿದ್ದ. ಆದರೆ ಈ ಬಾರಿ ಮೊನ್ನೆ ಸಂಸದರ ಕಚೇರಿಗೆ ತೆರಳಿ ಪಾಸ್ ಪಡೆದಿದ್ದ ಆರೋಪಿ ಜೊತೆಗೆ ದೆಹಲಿಯ ಫ್ರೆಂಡ್ ಎಂದು ಶರ್ಮಾ ಎಂಬಾತನಿಗೂ ಪಾಸ್ ಪಡೆದಿದ್ದ ಒಂದೇ ಪಾಸ್ನಲ್ಲಿ ಇಬ್ಬರು ಸಂಸತ್ತಿನೊಳಗೆ ಪ್ರವೇಶಿಸಿದ್ದ ಆರೋಪಿಗಳು.
ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ ಬೆನ್ನಲ್ಲೇ ಮೈಸೂರು ಪೊಲೀಸರು ಮನೋರಂಜನ್ ನಿವಾಸಕ್ಕೆ ತೆರಳಿ ನಿನ್ನೆಯಿಂದ ಮನೆಮುಂದೆಯೇ ಪೊಲೀಸರು ಕುಳಿತಿದ್ದಾರೆ.