ಮಹಾರಾಷ್ಟ್ರ:- ಇಲ್ಲಿನ ಪುರಾತನ ಪ್ರಸಿದ್ಧ ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯಕ್ಕೆ ಪರಿಷತ್ ಶಾಸಕರು ಹಾಗೂ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಟಿಎ ಶರವಣ ಅವರು ಭೇಟಿ ನೀಡಿದ್ದರು.
ಭೇಟಿ ವೇಳೆ ದೇವರ ದರ್ಶನ ಪಡೆದ ಟಿಎ ಶರವಣ ಅವರು, ನಾಡಿನ ಒಳಿತಿಗಾಗಿ ಮತ್ತು ಜನರ ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು. ಬಳಿಕ ದೇವರ ಪ್ರಸಾದ ಸ್ವೀಕರಿದರು. ಇದೇ ವೇಳೆ ಟಿಎ ಶರವಣ ಅವರ ಜೊತೆ ಎಂಎಲ್ಸಿ ಬೋಜೇಗೌಡ ಅವರು ಸಹ ಇದ್ದರು. ಇನ್ನೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟಿಎ ಶರವಣ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತಾಯಿಯ ದರ್ಶನ ಪಡೆದು ಪುನೀತರಾದರು.