ಮಧ್ಯಪ್ರದೇಶ:- ಬಿಡ್ಡಿಂಗ್ ಮೂಲಕ ಹೆಣ್ಣು ಮಕ್ಕಳನ್ನು ಮಾರುವ ಕೆಟ್ಟ ಸಂಪ್ರದಾಯ ದೇಶದ ಒಂದು ಮೂಲೆಯಲ್ಲಿ ಇನ್ನೂ ಜೀವಂತವಾಗಿದೆ. ಎಸ್ ನೀವು ನಂಬದಿದ್ದರೂ ಇದು ಸತ್ಯ.. ಹೆತ್ತವರೇ ಮಕ್ಕಳನ್ನು ಮಾರಾಟ ಮಾಡುತ್ತಾರೆ ಅಂದ್ರೆ ನೀವು ಕೊಂಚ ನಂಬದಿರಬಹುದು. ಆದ್ರೂ ಇದು ಇನ್ನೂ ಇಂದಿಗೂ ಮುಂದುವರಿಯುತ್ತಿರುವುದು ದುರಂತ.
ಕರ್ನಾಟಕ ಸುರಕ್ಷಿತವಲ್ಲ, ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ: ರವಿಕುಮಾರ್ ಕಿಡಿ!
ಎಸ್, ಸಂಪ್ರದಾಯದ ಹೆಸರಲ್ಲಿ ಹೆಣ್ಣುಮಕ್ಕಳನ್ನು ಅವರ ಕುಟುಂಬದವರೇ ಹರಾಜು ಹಾಕುವ ಕೆಟ್ಟ ಪದ್ಧತಿ ಜೀವಂತವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಕಂಡು ಬಂದಿದೆ.
ಮಧ್ಯಪ್ರದೇಶದ ರಾಜ್ಗಢ್ನಲ್ಲಿ ಈ ಕೆಟ್ಟ ಸಂಪ್ರದಾಯ ಇನ್ನೂ ಕೂಡ ಜೀವಂತವಾಗಿದ್ದು, ಆತಂಕ ಹುಟ್ಟು ಹಾಕಿದೆ. ಜಗಡಾ ನಾಥರಾ ಎನ್ನುವ ಸಂಪ್ರದಾಯದಂತೆ ಮಕ್ಕಳನ್ನು ಹರಾಜು ಹಾಕಲಾಗುತ್ತದೆ.
ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರಿಗೆ ಈ ವಿಚಾರ ತಿಳಿದಿದ್ದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಮಗಳಿಗೆ ಬಿಡ್ಡಿಂಗ್ ನಡೆದು ಅತಿ ಹೆಚ್ಚು ಬಿಡ್ ಮಾಡಿದವರಿಗೆ ಮಗಳನ್ನು ಒಪ್ಪಿಸಲಾಗುತ್ತದೆ.ಈ ಗ್ರಾಮದಲ್ಲಿ ಮದುವೆಯಾದ ಅಥವಾ ಮದುವೆಯಾಗಲಿರುವ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ.
ಪದ್ಧತಿಯಲ್ಲಿ ಮೊದಲು ಮಹಿಳೆ ಬಾಲ್ಯವಿವಾಹಕ್ಕೆ ಒಳಗಾಗುತ್ತಾಳೆ. ನಂತರ ಬಾಲಕಿಯನ್ನು ದೈಹಿಕವಾಗಿ ನಿಂದಿಸಿ ಹಲವು ಮಂದಿ ಬಿಟ್ಟು ಹೋಗಿದ್ದಾರೆ, ಆದರೆ ಈ ಹೊರತಾಗಿಯೂ ಪತ್ನಿ ಆತನಿಗೆ ವಿಚ್ಛೇದನ ನೀಡುವುದಿಲ್ಲ.
ವಿಚ್ಛೇದನಕ್ಕಾಗಿ, ಹುಡುಗಿಯ ತಂದೆ ಆಕೆಯ ಅತ್ತೆಗೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಹಣಕ್ಕಾಗಿ, ಹುಡುಗಿಯ ತಂದೆ ಮಗಳನ್ನು ಹರಾಜು ಹಾಕುತ್ತಾನೆ.
ಒಟ್ಟಾರೆಯಾಗಿ ಇಂತಹ ಕಾಲದಲ್ಲೂ IPL ರೀತಿ ಬಿಡ್ ಕೂಗುತ್ತಿರುವುದು ನಾಚಿಕೆಗೇಡಿನ ಸಂಗತಿ.