ಮಂಗಳೂರು:- ಪೋಷಕರೇ ನೀವು ಮಕ್ಕಳನ್ನು ಎಷ್ಟು ಜಾಗೃತಿ ನೋಡಿಕೊಂಡರೂ ಸಣ್ಣ ಪುಟ್ಟ ಎಡವಟ್ಟು ಅಗೋಗು ಸಹಜ. ಆದರೆ ನಿರ್ಲಕ್ಷ್ಯ ಬೇಡ ಎಂದು ಎನ್ನುವುದಕ್ಕೆ ನಾವು ಹೇಳುತ್ತಿರುವ ಈ ಸ್ಟೋರಿ ನಿದರ್ಶನ.
ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಘಟನೆ ಮಂಗಳೂರು ಬಳಿ ನಡೆದಿದೆ. ಅನಸ್ ಮೃತ ಬಾಲಕ. ಕಾಸರಗೋಡು ಜಿಲ್ಲೆಯ ಕುಂಬಳೆಯ ಭಾಸ್ಕರನಗರ ನಿವಾಸಿ ಅನ್ವರ್, ಮಹರೂಫಾ ದಂಪತಿಯ ಪುತ್ರ ಅನಸ್ ಪಿಸ್ತಾ ತಿನ್ನುತ್ತಿದ್ದ ವೇಳೆ ಪಿಸ್ತಾದ ಸಿಪ್ಪೆಯನ್ನೂ ತಿಂದಿದ್ದ.
ಆ ಸಂದರ್ಭದಲ್ಲಿ ಪೋಷಕರು ಸಿಪ್ಪೆಯನ್ನು ಬಾಯಿಂದ ಹೊರ ತೆಗೆದಿದ್ದರು. ಬಳಿಕ ತಕ್ಷಣವೇ ಉಪ್ಪಳದ ಆಸ್ಪತ್ರೆಗೆ ಪೋಷಕರು ಅನಾಸ್ನನ್ನು ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಗಂಟಲಿನಲ್ಲಿ ಯಾವುದೇ ವಸ್ತು ಇಲ್ಲ ಎಂದು ತಿಳಿಸಿದ್ದರು. ಆ ಕಾರಣಕ್ಕೆ ಮಗುವನ್ನು ಮನೆಗೆ ಕರೆತರಲಾಗಿತ್ತು.