ಬೆಂಗಳೂರು:- ನಗರದ ಮಲ್ಲೇಶ್ವರಂ ಪೈಪ್ಲೈನ್ನ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಮಾತನಾಡಿಸಿ ಮಹಿಳೆಯೊಬ್ಬಳು ಅಪಹರಿಸಿರುವ ಘಟನೆ ಜರುಗಿದೆ.
ರೈತರೇ ಗಮನಿಸಿ.. ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರಿಗೆ ಬೀಳುತ್ತೆ ಭಾರೀ ದಂಡ..!
ದಿವ್ಯ ಭಾರತಿ ಹಾಗೂ ಲೋಕೇಶ್ ದಂಪತಿಯ ಪುತ್ರಿ ನವ್ಯ ಅಪಹರಣಕ್ಕೊಳಗಾದ ಮಗು ಎನ್ನಲಾಗಿದೆ. ನಿನ್ನೆ ಈ ಘಟನೆ ಜರುಗಿದ್ದು, ತಾಯಿ ಮೊದಲ ಮಗುವನ್ನು ಶಾಲೆಗೆ ಕಳಿಸಲು ರೆಡಿ ಮಾಡುತ್ತಿದ್ದರು. ಈ ವೇಳೆ ನವ್ಯ ಮನೆಯ ಹೊರಗೆ ಆಟವಾಡುತ್ತಿದ್ದಳು. ಮನೆ ಬಳಿ ಅಪರಿಚಿತ ಮಹಿಳೆಯೊಬ್ಬಳು ಬಂದು ಮಗುವನ್ನು ಮಾತನಾಡಿಸಿ ಕರೆದೊಯ್ದಿದ್ದಾಳೆ. ಮಗುವನ್ನು ಅಪಹರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದೆ ಪ್ರಕರಣ ಸಂಬಂಧ ಆರೋಪಿತೆ ಮಹಿಳೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯೊಬ್ಬರು ಮಗುವನ್ನು ಮೊದಲು ಮಾತನಾಡಿಸಿ ಬಳಿಕ ಯಾರಿಗೂ ಗೊತ್ತೇ ಆಗದಂತೆ ಮಗುವನ್ನು ಅಪಹರಣ ಮಾಡಿಕೊಂಡು ಕರೆದೊಯ್ಯುದಿದ್ದಾಳೆ. ಅಂದಾಗೆ ಈ ಘಟನೆ ನಡೆದಿರೋದು ಬೆಂಗಳೂರಿನ ಮಲ್ಲೇಶ್ವರಂ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ. ಎರಡೂವರೆ ವರ್ಷದ ಮಗುವನ್ನು ಹಾಡಹಗಲೇ ಅಪಹರಣ ಮಾಡಿಕೊಂಡು ಮಹಿಳೆ ಎಸ್ಕೇಪ್ ಆಗಿದ್ದಳು. ಬೆಳಗ್ಗೆಯಿಂದ ರಾತ್ರಿವರೆಗೆ ಮಗುಗಾಗಿ ಹುಡುಕಾಡಿರುವ ಪೋಷಕರು ಬಳಿಕ ಮಗು ಸಿಕ್ಕರೇ ತಂದು ಕೊಡಿ ಅಂತ ಮನವಿ ಮಾಡಿದ್ದರು.
ನಿನ್ನೆ ಬೆಳಗ್ಗೆ 9.20 ರ ಸುಮಾರಿಗೆ ಹೆಣ್ಣು ಮಗುವನ್ನು ಮಹಿಳೆ ಅಪಹರಣ ಮಾಡಿ ಕರೆದುಕೊಂಡು ಹೋಗಿದ್ದಳು. ದಿವ್ಯಾ ಭಾರತಿ ಮತ್ತು ಲೋಕೇಶ್ ದಂಪತಿಯ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿದ್ದಳು. ಮೊದಲ ಮಗುವನ್ನ ಶಾಲೆಗೆ ಕಳಿಸಲು ತಾಯಿ ರೆಡಿ ಮಾಡುತ್ತಿದ್ದಾಗ ಎರಡೂವರೆ ವರ್ಷದ ಮಗು ಹೊರಗೆ ಆಟವಾಡುತ್ತಿದ್ದಳು. ಆಗ ಮನೆ ಬಳಿ ಬಂದ ಸುಜಾತ ಎನ್ನುವ ಮಹಿಳೆ ಕಿಡ್ನ್ಯಾಪ್ ಮಾಡಿದ್ದಾಳೆ. ಆರೋಪಿ ಸುಜಾತಾ ಕೂಡ ಮಗು ಇದ್ದ ಏರಿಯಾದಲ್ಲೇ ಇದ್ದಳು ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
ಮಕ್ಕಳನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಳ್ಳಬೇಕು. ಅಪರಿಚಿತರ ಜೊತೆ ಮಾತನಾಡಬಾರದು, ಹೋಗಬಾರದು ಅಂತೆಲ್ಲ ಹೆತ್ತವರು ತಿಳಿ ಹೇಳಬೇಕು. ಇಲ್ಲದಿದ್ರೆ ಈ ರೀತಿ ಕಳ್ಳರು ನಿಮ್ಮ ಮಕ್ಕಳನ್ನು ಕದ್ದು ತಪ್ಪು ದಾರಿಗೆ ಬಳಸಿಕೊಳ್ಳುತ್ತಾರೆ. ಸದ್ಯ ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹುಡುಕಾಟ ನಡೆಸಿದ್ದ ಪೊಲೀಸರು ಆರೋಪಿ ಸುಜಾತಳನ್ನ ಬಂಧಿಸಿದ್ದಾರೆ.