ಆಗ್ರಾ:- ಪೋಷಕರೇ ಎಚ್ಚರ, ಎಚ್ಚರ, ಮಕ್ಕಳ ಮೇಲಿರಲಿ ಹೆಚ್ಚಿನ ಗಮನ. ಹೊರಗಡೆ ಮಕ್ಕಳನ್ನು ಕರೆದುಕೊಂಡು ಹೋದ್ರೆ, ಮಕ್ಕಳ ಮೇಲೆ ಹೆಚ್ಚಿನ ಗಮನ ಇರಬೇಕು. ಅದು ಬಿಟ್ಟು, ಫ್ರೆಂಡ್ಸ್ ಸಿಕ್ಕಿದ್ರೂ, ಅತವಾ ಯಾರೋ ನೆಂಟ್ರೂ ಸಿಕ್ಕಿದ್ರೂ ಅಂತ ಮಕ್ಕಳ ಮೇಲೆ ಗಮನ ಕಡಿಮೆ ಆದ್ರೆ ಭಾರೀ ಅನಾಹುತವೇ ಸಂಭವಿಸಬಹುದು. ಯಾಕೆ ಈ ರೀತಿ ಹೇಳುತ್ತಿದ್ದೀವಿ ಅಂತ ಅನ್ಕೊತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ನೋಡಿ.
ಅಪಘಾತದಲ್ಲಿ ಮುಗ್ಧ ಪುಟ್ಟ ಬಾಲಕಿಯೊಬ್ಬಳು ತನ್ನ ಪ್ರಾಣ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಹೌದು ವೀಕ್ಷಕರೇ ,, ಇದು ತುಂಬಾ ದುಖಃದ ವಿಚಾರ. ಮಾಲ್ ನಲ್ಲಿ ಕಾರಿನ ಕೆಳಗೆ ಬಿದ್ದು ಒಂದೂವರೆ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಶಾಪಿಂಗ್ ಗೆ ಹೋಗಿದ್ದ ಪೋಷಕರು, ಶಾಪಿಂಗ್ ನಂತರ ಪಾರ್ಕಿಂಗ್ ಸ್ಥಳದಲ್ಲಿ ಹರಟೆ ಹೊಡೆಯುವುದರಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ, ಅವರು ತಮ್ಮ ಮಗು ಎಲ್ಲಿದೆ ಎಂಬುದನ್ನು ಮರೆತಿದ್ದಾರೆ. ಇದ್ದಕ್ಕಿದ್ದಂತೆ, ಮಗು ಇನ್ನೊಬ್ಬ ಹುಡುಗನೊಂದಿಗೆ ಆಟವಾಡುತ್ತಿತ್ತು ಮತ್ತು ಕಾರಿನ ಕಡೆಗೆ ಹೋಯಿತು. ಈ ವೇಳೆ ಮತ್ತೊಬ್ಬ ವ್ಯಕ್ತಿ ಕಾರನ್ನು ತೆಗೆದುಕೊಂಡು ಹೋಗಲು ಯತ್ನಿಸಿದ್ದಾನೆ. ಅವನು ಮೊದಲು ಕಾರನ್ನು ಹಿಂದಕ್ಕೆ ತೆಗೆದುಕೊಂಡನು. ನಂತರ ಹುಡುಗ ಕಾರಿನ ಮುಂದೆ ಓಡಿದನು. ಹುಡುಗನನ್ನು ನೋಡಿಕೊಳ್ಳದ ಚಾಲಕ ಇದ್ದಕ್ಕಿದ್ದಂತೆ ಕಾರನ್ನು ಹುಡುಗನ ಮೇಲೆ ಹರಿಸಿ ಬಿಟ್ಟಿದ್ದಾನೆ.
ಬಾಲಕ ಕಿರುಚುತ್ತಿರುವುದನ್ನು ಗಮನಿಸಿದ ಕಾರಿನ ಚಾಲಕ ತಕ್ಷಣ ಕಾರನ್ನು ನಿಲ್ಲಿಸಿ ಕೆಳಗೆ ಇಳಿದಿದ್ದಾನೆ. ಅಷ್ಟರಲ್ಲಿ ಮಗನ ತಾಯಿ ಅಳುವುದನ್ನು ಕೇಳಿ ಓಡಿಹೋಗಿ ಅವನನ್ನು ಎತ್ತಿಕೊಂಡು ಹೋದರು. ಬಾಲಕನನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬಾಲಕ ಅದಾಗಲೇ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಅದೇನೇ ಆಗಲಿ ಪೋಷಕರಿಗೆ ಮಕ್ಕಳ ಮೇಲೆ ಹೆಚ್ಚು ಕಾಳಜಿ ಇರಬೇಕು. ಈ ರೀತಿ ನಿರ್ಲಕ್ಷ್ಯ ಮಾಡಿ. ಮಗು ಜೀವಾನೆ ಕಳೆದುಕೊಂಡಿದೆ. ಪೋಷಕರೇ ನಿಮ್ಮ ಗಮನ ಆದಷ್ಟು ಮಕ್ಕಳ ಮೇಲಿರಲಿ.