ಬೆಂಗಳೂರು:- ನವೆಂಬರ್ ನಲ್ಲಿ ಸಿಎಂ ಬದಲಾಗ್ತಾರೆ ಎಂಬ ಆರ್ ಅಶೋಕ್ ಹೇಳಿಕೆಗೆ ಸಂಬಂಧಪಟ್ಟಂತೆ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಅಶೋಕ್ ಯಾವಾಗ ಜ್ಯೋತಿಷ್ಯ ಕಲಿತುಕೊಂಡ್ರು ಅಂತ ಗೊತ್ತಿಲ್ಲ, ಅವರ ಜ್ಯೋತಿಷ್ಯ ಶುದ್ಧ ಸುಳ್ಳು ಎಂದು ತಿರುಗೇಟು ನೀಡಿದ್ದಾರೆ.
ಧರ್ಮ, ಧಾರ್ಮಿಕ ನಂಬಿಕೆ, ಆಚರಣೆಗಳಲ್ಲಿ ಬಿಜೆಪಿ ರಾಜಕೀಯ ಹುಡುಕುತ್ತಿದೆ: DCM ಡಿ.ಕೆ.ಶಿವಕುಮಾರ್
ಈ ಬಗ್ಗೆ ಮಾತನಾಡಿದ ಅವರು, ಅಶೋಕ್ ಅವರು ಯಾವಾಗ ಜ್ಯೋತಿಷ್ಯ ಕಲಿತುಕೊಂಡ್ರು ಗೊತ್ತಿಲ್ಲ, ಯಾವ ಟ್ರೇನಿಂಗ್ ಸ್ಕೂಲ್ ನಲ್ಲಿ ಇದ್ನ ಕಲಿತ್ರೋ, ಯಾವ ಜೋತಿಷ್ಯ ಹೇಳ್ಕೊಟ್ಟಿದರೋ ಗೊತ್ತಿಲ್ಲ ಆದರೆ ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆ ಸೂಚನೆ ಇಲ್ಲ, ಅವರ ಜ್ಯೋತಿಷ್ಯ ಸುಳ್ಳು ಟಾಂಗ್ ನೀಡಿದರು.
ಇದೇ ವೇಳೆ ಮೈಕ್ರೋ ಫೈನಾನ್ಸ್ ಬಿಲ್ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್, ಮೈಕ್ರೋ ಫೈನಾನ್ಸ್ ವಿರುದ್ಧ ಹೊಸ ಕಾನೂನು ತರಲು ರಾಜ್ಯಪಾಲರು ಕಾನೂನು ತಜ್ಞರ ಜೊತೆ ಮಾತನಾಡಿ ತೀರ್ಮಾನ ಮಾಡಬಹುದು. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಹೊಸ ಕಾನೂನು ಎಫೆಕ್ಟೀವ್ ಆಗಿ ಇವತ್ತೇ ಆಗುತ್ತೇ ಅನ್ನೋದು ಗೊತ್ತಿಲ್ಲ, ಈ ಬಗ್ಗೆ ಅವರು ಇನ್ನೂ ಕಮ್ಯೂನಿಕೇಷನ್ ಮಾಡಿಲ್ಲ, ರಾಜ್ಯಪಾಲರು ಬದಲಾವಣೆಗೆ ಹೇಳಿದ್ರೆ ಅದರಲ್ಲಿ ಕೆಲ ಬದಲಾವಣೆ ಮಾಡುತ್ತೇವೆ, ಒಪ್ಪಿದ್ರೆ ಅದು ಹೇಗಿದೆ ಅದನ್ನೇ ಒಪ್ಪಿದ್ರೆ ಅದೇ ಜಾರಿಯಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ಬಳಿಕ ಗ್ರೇಟರ್ ಬೆಂಗಳೂರು ವಿಧೆಯಕ ವಿಳಂಬ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವರು, ಗ್ರೇಟರ್ ಬೆಂಗಳೂರು ವಿಧೆಯಕಕ್ಕಾಗಿ ಹೊಸ ಸದನ ಸಮಿತಿಯನ್ನು ಮಾಡಲಾಗಿದೆ. ಹಾಗೂ ಈ ಬಗ್ಗೆ ನಾಲ್ಕೈದು ಕಡೆ ಪಬ್ಲಿಕ್ ಅಭಿಪ್ರಾಯ ಪಡೆಯಲು ಅವಕಾಶ ಮಾಡಿದ್ದಾರೆ ಅದಲ್ಲಿ ಒಳ್ಳೆಯ ಸಲಹೆ ಬಂದ್ರೆ ಅದನ್ನ ಸದನಕ್ಕೆ ಚರ್ಚೆಗೆ ತರಬೇಕು ಎಂದು ಪರಂ ತಿಳಿಸಿದರು.
ಹೊಸೂರಿನಲ್ಲಿ ಹೊಸ ಏರ್ ಪೋರ್ಟ್ ಬೇಡಿಕೆ ಮೊದಲಿನಿಂದಲೂ ಇದೆ, ಈಗಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜನ ಸಂಖ್ಯೆ ಹೆಚ್ಚಾಗಿದೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಮಾಡೋದಕ್ಕೆ ಮತ್ತೊಂದು ಏರ್ಪೋರ್ಟ್ ಮಾಡೋದಕ್ಕೆ ನಾವು ಯೋಜನೆ ಮಾಡಿದ್ದೇವೆ ಎಂದರು.
ದೇಶದ ಬೇರೆ ಬೇರೆ ಮೆಟ್ರೋ ಸಿಟಿಯಲ್ಲಿ ಎರಡು ನಿಲ್ದಾಣ ಇದ್ದಾವೆ. ಅದೇ ರೀತಿ ನಮ್ಮಲ್ಲೂ ಕೂಡ ಎರಡನೇ ಏರ್ಪೋರ್ಟ್ ಆಗಬೇಕು. ಇದಕ್ಕೆ ಕೇಂದ್ರ ಸರ್ಕಾರ ಯಾವ ರೀತಿ ಅನುಮತಿ ಕೊಡ್ತಾರೆ ಅನ್ನೋದನ್ನ ನೋಡಬೇಕು ಎಂದು ಪರಂ ತಿಳಿಸಿದರು.
ಏರ್ಪೋರ್ಟ್ ಗೆ ಎರಡ್ಮೂರು ಕಡೆ ಜಾಗ ನೋಡಿಕೊಂಡಿದ್ದಾರೆ, ಇನ್ನ ಕೂಡ ಫಿಕ್ಸ್ ಆಗಿಲ್ಲ, ಕೇಂದ್ರದಿಂದ ಅನುಮತಿ ಸಿಕ್ಕ ಕೂಡಲೇ ಜಾಗ ಫಿಕ್ಸ್ ಮಾಡಿ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಸಚಿವ ಪರಮೇಶ್ವರ್ ಹೇಳಿದರು.