ಬೆಂಗಳೂರು: ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಹೈಕಮಾಂಡ್ ನಮ್ಮ ನಿರ್ಧಾರಗಳನ್ನ ತೆಗೆದುಕೊಂಡಿಲ್ಲ ಹಾಗೆ ನಮ್ಮ ಅಭಿಪ್ರಾಯ ತೆಗೆದುಕೊಂಡು ಮಾಡದಿರುವುದಕ್ಕೆ ನಿಗಮ ಮಂಡಳಿ (Corporation Board) ನೇಮಕ ಇಷ್ಟು ಗೊಂದಲ ಆಗ್ತಿದೆ ಅಂತ ಗೃಹ ಸಚಿವ ಪರಮೇಶ್ವರ್ (G Parameshwara), ಹೈಕಮಾಂಡ್ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿಗಮ ಮಂಡಳಿ ನೇಮಕಾತಿಗೆ ನಮ್ಮ ಅಭಿಪ್ರಾಯವನ್ನೂ ಪಡೆಯಬೇಕು. ಆದ್ರೆ ನಮ್ಮನ್ನ ಯಾರೂ ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿರಬಹುದು. ಆದರೆ ನಮ್ಮ ಜತೆ ಮಾತನಾಡಿ ಪಟ್ಟಿ ಮಾಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರು ಯಾರ್ಯಾರು ಕೆಲಸ ಮಾಡಿದ್ದಾರೆ ಅಂತ ನನಗೆ ಗೊತ್ತಿದೆ. ಹತ್ತಾರು ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರೋದಕ್ಕೆ ಹೀಗೆ ಆಗಿದೆ. ಕೆಲಸ ಮಾಡೋರಿಗೆ ಕೊಡದೇ ಹೋದ್ರೆ, ಕೆಲಸ ಮಾಡಿರೋರಿಗೆ ನೋವಾಗುತ್ತದೆ. ಅಸಮಾಧಾನ ಆಗುತ್ತದೆ, ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರನ್ನ ಕೇಳಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.