ಬೆಂಗಳೂರು: ನಿಗಮಮಂಡಳಿಯಲ್ಲಿ ನೇಮಕಗೊಂಡಿರೋ ಕೆಲ ಶಾಸಕರ ಅಸಮಾಧಾನ ವಿಚಾರ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆ ಬೆಳವಣಿಗೆ ಎಲ್ಲಾ ನನಗೆ ಗೊತ್ತಿಲ್ಲ ಹೈಕಮಾಂಡ್ ಅನುಮತಿ ತೆಗೆದುಕೊಂಡು,ಚರ್ಚೆ ಮಾಡಿ ಸಿಎಂ ಡಿಸಿಎಂ ಮಾಡಿದ್ದಾರೆ ಯಾರು ಒಪ್ಪುತ್ತಾರೋ ಒಪ್ಪೋದಿಲ್ಲವೋ ಗೊತ್ತಿಲ್ಲ ಅಧಿಕೃತವಾಗಿ ಈಗ ಪ್ರಕಟಣೆ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ನಿಗಮ-ಮಂಡಳಿಗಳ ನೇಮಕ ಪಟ್ಟಿ ಬಿಡುಗಡೆ!
ಬೆಳಗ್ಗೆ ಡಿಸಿಎಂ ಮೀಟ್ ಆದ ಬಗ್ಗೆನೂ ಪ್ರಸ್ತಾಪ ಮಾಡಿದಾಗ ತುಮಕೂರನಲ್ಲಿ 29 ಕ್ಕೆ ಸರ್ಕಾರಿ ಕಾರ್ಯಕ್ರಮ ಇದೆ ಡಿಸಿಎಂ ಬರಬೇಕು ಅಂತ ಹೇಳಿದ್ದೆನೆ ನಿಗಮಂಡಳಿ ಅಭಿಪ್ರಾಯ ವಿಚಾರ ಮೊದಲೇ ಹೇಳಿದ್ದೆನೆ ಈ ವಿಚಾರ ಇಂದು ಮಾತಾಡಿಲ್ಲ ಎಂದರು.
ನಿಗಮ ಮಂಡಳಿ ವಿಚಾರವಾಗಿ ಪರಿಷತ್ ಸದಸ್ಯರ ಅಸಮಾಧಾನ ವಿಚಾರ ಬಗ್ಗೆಯೂ ಮಾತನಾಡಿ ಇದೆಲ್ಲವೂ ಸಿಎಂ ಅಂಗಳದಲ್ಲಿದೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.
ಹೆಗಡೆಯವರು ಸರ್ಕಾರಕ್ಕೆ ವಾರದಲ್ಲಿ ಸಲ್ಲಿಸುತ್ತೆನೆ ಅಂದಿದ್ದಾರೆ ಅದನ್ನ ಸರ್ಕಾರ ಸ್ವೀಕರಿಸಿ, ಪಬ್ಲಿಕ್ ಡೊಮೈನ್ ಗೆ ತರಬೇಕು 160 ಕೋಟಿ ಖರ್ಚು ಮಾಡಿ ಒಂದು ಉದ್ದೇಶಕ್ಕಾಗಿ ಸಮೀಕ್ಚೆ ಮಾಡಿದ್ದಾರೆ ಹಿಂದೂಳಿದವರ ಅಭಿವೃದ್ಧಿಗೆ ಸಮೀಕ್ಷೆ ಮಾಡಲಾಗಿದೆ
ಪಕ್ಷಕ್ಕೆ ಕರೆತರುವಾಗ ಪರಿಶೀಲಿಸಿ ಸೇರ್ಪಡೆ ಮಾಡುವಂತೆ ಮಲ್ಲಿಕಾರ್ಜುನ ಖರ್ಗೆ ಸಲಹೆ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿ ಅದು ಒಳ್ಳೆಯದೇ. ಹೈಕಮಾಂಡ್ ಹೇಳಿದ ಮೇಲೆ ಪಾಲಿಸುತ್ತೆವೆ ಇನ್ನೊಂದಿಷ್ಟು ವೆರಿಪೈ ಮಾಡುತ್ತೆವೆ ಎಂದರು.