ಬೆಂಗಳೂರು:- ಡಯಾಲಿಸಿಸ್ ಸಮಸ್ಯೆ ಇರುವವರು ಇವತ್ತು ಪರದಾಟ ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಆರೋಗ್ಯ ಸಚಿವರ ದಿವ್ಯ ನಿರ್ಲಕ್ಷ್ಯದ ಹಿನ್ನಲೆ ಪ್ರತಿಭಟನೆಯ ಮೂಲಕ ಡಯಾಲಿಸೀಸ್ ಸಿಬ್ಬಂದಿ ಆಕ್ರೋಶ ಹೊರ ಹಾಕಲು ಸಜ್ಜಾಗಿದ್ದಾರೆ.
ರಾಜ್ಯದಲ್ಲಿ ಇಂದು ಡಯಾಲಿಸಿಸ್ ಎಮರ್ಜೆನ್ಸಿ ಎದುರಾಗುತ್ತಾ..? ಎನ್ನುವ ಪ್ರಶ್ನೆ ಉದ್ಭವಿಸಿದೆ. ಇವತ್ತು ಬಹುತೇಕ ರಾಜ್ಯದ 202 ಡಯಾಲಿಸಿಸ್ ಸೆಂಟರ್ ಬಂದ್ ಆಗಲಿದೆ. ಇಂದಿನಿಂದ ಸೇವೆ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ.
ಡಯಾಲಿಸೀಸ್ ನೌಕರರ ಸಂಘದ ಅಧ್ಯಕ್ಷ ಚೇತನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಫ್ರೀಡಂ ಪಾರ್ಕಿನಲ್ಲಿ ನೂರಾರು ಸಿಬ್ಬಂದಿಗಳಿಂದ ಪ್ರತಿಭಟನೆ ನಡೆಯಲಿದೆ.
ಪ್ರತಿಭಟನೆಗೆ ಪ್ರಮುಖ ಕಾರಣ
– ಕೋವಿಡ್ ನೆಪವೊಡ್ಡಿ ಸಂಬಳಕ್ಕೆ ಕತ್ತರಿ ಹಾಕಿರುವ ಸರ್ಕಾರ
– ಏಕಾಏಕಿ 50ರಷ್ಟು ಸಂಬಳ ಕಡಿತ ಮಾಡಿ ಜೀವನ ನಡೆಸುವುದು ಕಷ್ಟಕರ
– ಕಳೆದ ಎರಡುವರೆ ವರ್ಷಗಳಿಂದ ಅರ್ಧ ಸಂಬಳ ಪಡೆಯುತ್ತಿರುವ ಡಯಾಲಿಸಿಸ್ ಸಿಬ್ಬಂದಿ
– ಕನಿಷ್ಠ ಜೀವನಕ್ಕೂ ಸಾಲದ ಸಂಬಳ ಅಂತ ಸರ್ಕಾರದ ವಿರುದ್ಧ ಕಿಡಿ
– ಕಳೆದ ಎರಡುವರೆ ತಿಂಗಳ ಸಂಬಳ ಕೂಡ ಹೋಲ್ಡ್
– ಕೊಡುವ ಆ ಅರ್ಧ ಸಂಬಳ ಕೂಡ ಸಿಗದೇ ಪರದಾಟ
– ಈ ಹಿಂದೆ ಡಯಾಲಿಸಿಸ್ ಸೆಂಟರ್ ನಿರ್ವಹಣೆ ಮಾಡುತ್ತಿದ್ದ ಬಿಆರ್ಎಸ್ ಸಂಸ್ಥೆ
– 2021ಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಆಗದ ಕಾರಣ ನಿರ್ವಹಣೆಯಿಂದ ಹಿಂದೆ ಸರಿದ ಬಿಆರ್ಎಸ್
– ನಂತರದಲ್ಲಿ ಯಾವುದೇ ಟೆಂಡರ್ ಆಗದೇ ಕೋಲ್ಕತ್ತ ಮೂಲದ ESKAG ಸಂಜೀವಿನಿಗೆ ನಿರ್ವಹಣೆ ಜವಬ್ದಾರಿ
-ಈ ಹಿಂದೆ 45 ಸೆಂಟರ್ ಗಳ ಜವಬ್ದಾರಿ ಹೊತ್ತಿದ್ದ ESKAG
ಇದೀಗ ಈ ಕಂಪನಿಗೆ 202 ಸೆಂಟರ್ ಗಳ ಜವಬ್ದಾರಿ
– ಡಯಾಲಿಸಿಸ್ 650 ಸಿಬ್ಬಂದಿಗಳ ಸಂಬಳದ ಬಗ್ಗೆ ಅಸಡ್ಡೆ
– ಸ್ಯಾಲರಿ ಸಿಗದೇ, ಪಿಎಫ್, ಇಎಸ್ಐ ಇಲ್ಲದೇ 650 ಸಿಬ್ಬಂದಿಗಳ ಪರದಾಟ
– ತಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ಆರೋಗ್ಯ ಸಚಿವರಿಗೆ ಮನವಿ
– 3 ಬಾರಿ ಭೇಟಿ ಮಡಿದ್ರೂ ಸ್ಪಂದಿಸದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
GFX
ಡಯಾಲಿಸಿಸ್ ಸೆಂಟರ್ ಎಷ್ಟು..?
-ರಾಜ್ಯದಲ್ಲಿ ಒಟ್ಟು ಡಯಾಲಿಸಿಸ್ ಸೆಂಟರ್ 202
– ಬೆಂಗಳೂರು, ತುಮಕೂರು, ರಾಮನಗರ, ಗದಗ, ದ.ಕದಲ್ಲಿ 45 ಸೆಂಟರ್
-ಒಟ್ಟು ಡಯಾಲಿಸಿಸ್ ಸಿಬ್ಬಂದಿಗಳು:(ಗ್ರೂಪ್ ಡಿ, ಸ್ಟಾಫ್, ಡಯಾಲಿಸಿಸ್ ಟೆಕ್ನಿಶಿಯನ್ಸ್): 650
– ಪ್ರತಿ ದಿನ ರಾಜ್ಯದಲ್ಲಿ ನಡೆಯುವ ಒಟ್ಟು ಡಯಾಲಿಸಿಸ್ 2500