ವರ್ಷ ಪೂರ್ತಿ ಸಿಗುವ ಹಣ್ಣು ಎಂದರೆ ಪರಂಗಿ ಹಣ್ಣು ಎಂದು ಹೇಳಬಹುದು. ಕೇವಲ ಮಾರು ಕಟ್ಟೆಯಲ್ಲಿ ಮಾತ್ರವಲ್ಲದೆ ನಾವೇ ಸ್ವತಹ ಇದನ್ನು ಮನೆಯ ಬಳಿ ಬೆಳೆಯಬಹುದು. ಭೂಮಿಯ ಫಲವತ್ತತೆಯ ಆಧಾರದ ಮೇಲೆ ಪರಂಗಿ ಹಣ್ಣಿನ ರುಚಿ ನಿಂತಿರುತ್ತದೆ.
ಕರ್ನಾಟಕದಲ್ಲಿ ಎರಡು ದಿನ ಭಯಂಕರ ಚಳಿ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ!
ಪಪ್ಪಾಯಿಯಲ್ಲಿ ಫೈಬರ್, ಖನಿಜಗಳು, ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತವೆ. ಆದರೆ ಪಪ್ಪಾಯಿಯೊಂದಿಗೆ ಕೆಲವು ಪದಾರ್ಥಗಳನ್ನು ತಿನ್ನುವುದು ದೇಹಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಹಾಗಾದ್ರೆ ಪಪ್ಪಾಯಿಯೊಂದಿಗೆ ತಿನ್ನಬಾರದಾ ಪದಾರ್ಥಗಳು ಯಾವುವು ಅಂತೀರಾ? ಈ ಸ್ಟೋರಿ ಓದಿ.
ಹಾಲು: ಪಪ್ಪಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದನ್ನು ಸೇವಿಸುವುದರಿಂದ ಅನೇಕ ರೋಗಗಳು ತಕ್ಷಣವೇ ಗುಣವಾಗುತ್ತವೆ. ಆದರೆ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಪಪ್ಪಾಯಿಯೊಂದಿಗೆ ಸೇವಿಸಬಾರದು. ಏಕೆಂದರೆ ಇದು ದೇಹಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ.
ಕರಿದ ಪದಾರ್ಥಗಳು: ಪಪ್ಪಾಯಿಯೊಂದಿಗೆ ಕರಿದ ಪದಾರ್ಥಗಳನ್ನು ತಿನ್ನಬಾರದು. ಇವೆರಡನ್ನು ಒಟ್ಟಿಗೆ ತಿಂದರೆ ಹೊಟ್ಟೆಯಲ್ಲಿ ಉರಿ ತರಹದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಟೊಮೆಟೊ: ಪಪ್ಪಾಯಿಯೊಂದಿಗೆ ಟೊಮೆಟೊವನ್ನು ಕೂಡ ಸೇವಿಸಬಾರದು. ಬದಲಿಗೆ ಪಪ್ಪಾಯಿ ತಿಂದ ಸ್ವಲ್ಪ ಹೊತ್ತಿನ ನಂತರವಷ್ಟೇ ಟೊಮೆಟೊ ತಿನ್ನಬಹುದು. ಇಲ್ಲದಿದ್ದರೆ ನಿಮಗೆ ಅಸಿಡಿಟಿ ಸಮಸ್ಯೆ ಉಂಟಾಗಬಹುದು.
ಮೊಸರು ಮತ್ತು ಪಪ್ಪಾಯಿ: ಮೊಸರು ಮತ್ತು ಪಪ್ಪಾಯಿ ಎಂದಿಗೂ ಉತ್ತಮವಾದ ಕಾಂಬಿನೇಷನ್ ಅಲ್ಲ. ಹಾಗಾಗಿ ಇವೆರಡನ್ನೂ ಒಟ್ಟಿಗೆ ತಿನ್ನಬಾರದು. ಇದರಿಂದ ಎಂಜೈಮ್ ಪ್ಯಾಪಿನ್, ಅಲರ್ಜಿಯಂತಹ ಸಮಸ್ಯೆಗಳು ಉಂಟಾಗಬಹುದು.