ಪಾನಿಪುರಿಗೆ ದೇಶದೆಲ್ಲೆಡೆ ವಿಶೇಷ ಅಭಿಮಾನಿಗಳಿದ್ದಾರೆ. ಕೆಲವರಿಗೆ ಇದನ್ನು ತಿನ್ನದೆ ಇದ್ದರೆ ನಿದ್ದೆನೇ ಬರಲ್ಲ. ಪಾನಿಪುರಿ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ. ಅದ್ರಲ್ಲೂ ಕೆಲ ಹುಡುಗೀರಿಗೆ ಪಾನಿಪುರಿ ಅಂದ್ರೆ ಸಾಕು, ತಿನ್ನದೆ ಸಮಾಧಾನವಿರಲ್ಲ.
ಇದೀಗ ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಸದ್ದಿಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಯಾರಿ ಮಾಡಿಕೊಂಡಿದೆ. ಹೌದು, ಗೋಬಿ, ಕಬಾಬ್ ಬಳಿಕ ಈಗ ಪಾನಿಪುರಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.
ಆದರೆ, ಇದೀಗ ಪಾನಿಪುರಿ ಮಾರಾಟ ಮಾಡುತ್ತಿದ್ದ ಕೆಲ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದರಿಂದ ಬೆಚ್ಚಿ ಬೀಳಿಸುವ ಸತ್ಯಗಳು ಬಯಲಾಗಿದೆ. ಇದನ್ನು ನೋಡಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕದ ಕೆಲವು ಅಂಗಡಿಗಳಿಗೆ ದಾಳಿ ನಡೆಸಿ ಪಾನಿಪುರಿಗೆ ಬಳಸುವ ಪದಾರ್ಥಗಳಲ್ಲಿ ರಾಸಾಯನಿಕಗಳನ್ನು ಸೇರಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಇವು ಕ್ಯಾನ್ಸರ್ಕಾರಕ ಅಂಶಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.ಇದೀಗ ತಮಿಳುನಾಡಿನಲ್ಲಿಯೂ ಪಾನಿಪುರಿಯಲ್ಲಿ ರಾಸಾಯನಿಕ ಅಂಶ ಇರುವುದು ಅಲ್ಲಿನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಪಾನಿಪುರಿಗೆ ಬಳಸುವ ಚಾಟ್ಸ್, ಸ್ವೀಟ್ಗಳನ್ನು ತಿಂದರೆ ಕ್ಯಾನ್ಸರ್ ಬರುವುದು ಗ್ಯಾರಂಟಿ ಎನ್ನುತ್ತಾರೆ ವೈದ್ಯರು. ತಮಿಳುನಾಡಿನಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಇದೇ ರೀತಿಯ ಫಲಿತಾಂಶಗಳನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಇದರೊಂದಿಗೆ ಎರಡೂ ರಾಜ್ಯಗಳಲ್ಲಿ ಪಾನಿ ಪುರಿ ಮಾರಾಟವನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ.
ಇಷ್ಟೇ ಅಲ್ಲದೆ ಹಲವೆಡೆ ಅನೈರ್ಮಲ್ಯದಲ್ಲಿ ಪಾನಿಪುರಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಈ ರೀತಿ ಮಾರಾಟ ಮಾಡಿದ್ರೆ ಕ್ಯಾನ್ಸರ್ ಜೊತೆಗೆ ಹಲವು ರೋಗಗಳು ಹರಡುತ್ತವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.